ಗೃಹ ಸಚಿವರ ಮನೆ ಸುತ್ತಮುತ್ತಲೇ ಉಗ್ರರು ಅಡಗಿದ್ದಾರೆ: ಪ್ರಮೋದ್ ಮುತಾಲಿಕ್

ಶಿವಮೊಗ್ಗದ ಗೃಹ ಸಚಿವರ ಮನೆ ಸುತ್ತಮುತ್ತಲೇ ಉಗ್ರರು ಅಡಗಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. PFI ಸಂಘಟನೆ ಬ್ಯಾನ್ ಮಾಡಿದರೂ, ಮಾನಸಿಕತೆ ಬ್ಯಾನ್ ಆಗಿಲ್ಲ. ಕರಾವಳಿ ಭಾಗದಲ್ಲಿ ಉಗ್ರರ ಕೃತ್ಯ ಹೆಚ್ಚಾಗುತ್ತಿದೆ. ಹಾಗಾಗಿ ವಿಶೇಷ ಪಡೆಯ ಅಗತ್ಯ ಕರಾವಳಿ ಭಾಗಕ್ಕಿದೆ. ಇವರು ಬ್ಯಾನ್ ಆದರೂ ಬಾಲ ಬಿಚ್ಚೋದು ಮಾತ್ರ ಕಡಿಮೆಯಾಗಿಲ್ಲ. ಹಾಗಾಗಿ ಪೊಲೀಸರು ಇದನ್ನು ನಿರ್ಲಕ್ಷ್ಯ ಮಾಡಬಾರದು. PFI ಮಾತ್ರವಲ್ಲ SDPI ಕೂಡ ಬ್ಯಾನ್ ಆಗಬೇಕು ಎಂದರು.