ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​​​-ಜೆಡಿಎಸ್​ ನಡುವೆ ವಾರ್; ಹಲವರ ವಿರುದ್ಧ FIR

ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​​​-ಜೆಡಿಎಸ್​ ನಡುವೆ ವಾರ್; ಹಲವರ ವಿರುದ್ಧ FIR

ಜೆಡಿಎಸ್​​ನಿಂದ ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್ ಉಚ್ಚಾಟನೆಗೊಂಡ ನಂತರ ಜಾಲತಾಣದಲ್ಲಿ ಶಾಸಕರ ಬೆಂಬಲಿಗರು & JDS ಬೆಂಬಲಿಗರ ನಡುವೆ ವಾಕ್ಸಮರ ಆರಂಭಗೊಂಡಿದ್ದಲ್ಲದೆ,ಇದೀಗ ತಾರಕಕ್ಕೇರಿದ ವಾಕ್ಸಮರ ಗುಬ್ಬಿ ಠಾಣೆ ಮೆಟ್ಟಿಲೇರಿದೆ. ಉಭಯ ಬೆಂಬಲಿಗರ ನಡುವೆ ಪರಸ್ಪರ ನಿಂದನೆ ಆರೋಪ ಸಂಬಂಧ ಠಾಣೆಯಲ್ಲಿ 10 ಜನರ ಮೇಲೆ FIR ದಾಖಲಾಗಿದೆ. ಶಾಸಕ ಎಸ್​.ಆರ್​.ಶ್ರೀನಿವಾಸ್ ಅವರ ಮೂವರು ಬೆಂಬಲಿಗರು & ಜೆಡಿಎಸ್​​​​ನ 7 ಜನರ ವಿರುದ್ಧ FIR​ ದಾಖಲಾಗಿದೆ.