ಗದಗದಲ್ಲಿ ಘೋರ ದುರಂತ : ಕೊಡಲಿಯಿಂದ ಕೊಚ್ಚಿ ತಂದೆಯನ್ನು ಕೊಂದ ಮಗ

ಗದಗದಲ್ಲಿ ಘೋರ ದುರಂತ : ಕೊಡಲಿಯಿಂದ ಕೊಚ್ಚಿ ತಂದೆಯನ್ನು ಕೊಂದ ಮಗ

ದಗ : ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕೊಡಲಿಯಿಂದ ಕೊಚ್ಚಿ ತಂದೆಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹದ್ಲಿ ಗ್ರಾಮದ ಮೌಲಸಾಬ್ ತನ್ನ ತಂದೆ ಮಲಕ್ ಸಾಬ್ ನನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.