ಗಂಡನ ಹತ್ಯೆಗೆ 2 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದ ಪತ್ನಿ , ಪ್ರಿಯಕರ ಇತರ ನಾಲ್ವರ ಬಂಧನ
ಬೆಂಗಳೂರು, ; ಪತಿಯನ್ನು ಗುಂಡಿಕ್ಕಿ ಕೊಲೆ ಮಾಡಲು ಸುಪಾರಿ ನೀಡಿದ್ದ ಪತ್ನಿ ಸೇರಿದಂತೆ 6 ಮಂದಿ ಆರೋಪಿಗಳನ್ನು ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ.
ಶಿಡ್ಲಘಟ್ಟದ ಸುಮಿತ್ರಾ ಆಕೆಯ ಪ್ರಿಯಕರ ಮುನಿಕೃಷ್ಣ ಆತನ ಸಹೋದರ ಕಿಟ್ಟಿ ಅಲಿಯಾಸ್ ರಾಮಕೃಷ್ಣ, ಹರೀಶ, ಪ್ರವೀಣ್ ಮತ್ತು ಮುರಳಿ ಬಂಧಿತ ಆರೋಪಿಗಳಾಗಿದ್ದಾರೆ.ಮುನಿಕೃಷ್ಣ ಜೊತೆಗೆ ಸುಮಿತ್ರಾಗೆ ಅಕ್ರಮ ಸಂಬಂಧವಿದ್ದು ಅದಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡುವಂತೆ ಗನ್‌ನ್ನು ಪ್ರಿಯಕರನಿಗೆ ನೀಡಿ, ಸುಪಾರಿ ನೀಡಿದ್ದಳು. ಅದರಂತೆ ಕಳೆದ ಆ. 18ರಂದು ಶಿಡ್ಲಘಟ್ಟ ದಲ್ಲಿ ಪ್ರಿಯಕರ ಮುನಿಕೃಷ್ಣ ಇನ್ನೂ ನಾಲ್ಕು ಮಂದಿಯ ಜೊತೆಗೂಡಿ ಗೋವಿಂದಪ್ಪನ ಮೇಲೆ ಗುಂಡು ಹಾರಿಸಿ, ಹತ್ಯೆಗೆ ಯತ್ನಿಸಿದ್ದರು. ಆದರೆ ಐದಾರು ಗುಂಡೇಟು ತಗುಲಿದರೂ ಅದೃಷ್ಟವಶಾತ್ ಗೋವಿಂದಪ್ಪ ಪ್ರಾಣಾಪಾಯದಿಂದ ಪಾರಾಗಿ ನೀಡಿದ ದೂರಿನ ಮೇರೆಗೆ ಶಿಡ್ಲಘಟ್ಟ ನಗರ ಪೊಲೀಸರು ತನಿಖೆ ನಡೆಸಿ ಸುಮಿತ್ರಾ, ಹಾಗೂ ಆಕೆಯ ಪ್ರಿಯಕರ ಮುನಿಕೃಷ್ಣ, ಆತನ ಸಹೋದರ ಕಿಟ್ಟಿ ಅಲಿಯಾಸ್ ರಾಮಕೃಷ್ಣ, ಹರೀಶ, ಪ್ರವೀಣ್ ಮತ್ತು ಮುರಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪ್ಪನ ಪತ್ನಿ ಸುಮಿತ್ರಾ 2 ಲಕ್ಷ ರೂಗೆ ಪ್ರಿಯಕರನ ಸಹೋದರನಿಗೆ ಸುಪಾರಿ ನೀಡಿದ್ದಳು. ಮಸಲ್ ಲೊಡೇಡ್ ಗನ್ ಬಳಸಿ ಗೋವಿಂದಪ್ಪ ಹತ್ಯೆಗೆ ಯತ್ನಿಸಲಾಗಿತ್ತು.