ಕ್ರಿಸ್‌ಮಸ್‌‌ ಸೆಲೆಬ್ರೇಷನ್‌‌ಗೆ ಮಗಳ ಜೊತೆ ವಿದೇಶಕ್ಕೆ ಹಾರಿದ ಪ್ರಿಯಾಂಕ ಚೋಪ್ರಾ

ಕ್ರಿಸ್‌ಮಸ್‌‌ ಸೆಲೆಬ್ರೇಷನ್‌‌ಗೆ ಮಗಳ ಜೊತೆ ವಿದೇಶಕ್ಕೆ ಹಾರಿದ ಪ್ರಿಯಾಂಕ ಚೋಪ್ರಾ

ಬಾಲಿವುಡ್‌ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್‌‌‌‌ ಲೆವೆಲ್‌‌‌ನಲ್ಲಿ ಮಿಂಚುತ್ತಿದ್ದು, ಹಿಂದಿ & ಇಂಗ್ಲಿಷ್‌‌‌‌‌ ಭಾಷೆಯ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಈ ನಡುವೆ ಅವರು ಕ್ರಿಸ್‌‌ಮಸ್‌ ಹಬ್ಬ ಆಚರಿಸಲು ಮಗಳ ಜೊತೆ ವಿದೇಶಕ್ಕೆ ಹಾರಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಿಮಾನದಲ್ಲಿ ಕುಳಿತಿರುವ ಫೋಟೋಗೆ, ನಾವು ಹೋಗುತ್ತಿದ್ದೇವೆ ಎಂದು ಅಡಿಬರಹ ನೀಡಿದ್ದಾರೆ. ಇನ್ನು ತಾವು ಎಲ್ಲಿಗೆ ಟ್ರಾವೆಲ್‌ ಮಾಡುತ್ತಿದ್ದೇವೆ ಎಂದು ಪ್ರಿಯಾಂಕ ಹೇಳಿಲ್ಲ.