ಕೌಂಟಿ ಚಾಂಪಿಯನ್‌ಶಿಪ್: ಲೂಸಿಸ್ಟರ್‌ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ

ಕೌಂಟಿ ಚಾಂಪಿಯನ್‌ಶಿಪ್: ಲೂಸಿಸ್ಟರ್‌ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ

ಭಾರತದ ಹಿರಿಯ ಆಟಗಾರ ಅಜಿಂಕ್ಯಾ ರಹಾನೆ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಲುಸಿಸ್ಟರ್‌ಶೈರ್ ಕೌಂಟ ಕ್ರಿಕೆಟ್ ಕ್ಲಬ್(ಎಲ್‌ಸಿಸಿಸಿ) ಈ ಬಗ್ಗೆ ಮಂಗಳವಾರ ಅಧಿಕರತವಾಗಿ ಮಾಹಿತಿಯನ್ನು ನೀಡಿದ್ದು 2023ರ ಆವೃತ್ತಿಯಲ್ಲಿ ಆಡಲು ರಹಾನೆ ಸಹಿ ಹಾಕಿದ್ದಾರೆ ಎಂದು ತಿಳಿಸಿದೆ.

34ರ ಹರೆಯದ ಅಜಿಂಕ್ಯಾ ರಹಾನೆ ಈ ವರ್ಷದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಲಿದ್ದು ಐಪಿಎಲ್ ಟೂರ್ಮಿ ಮುಕ್ತಾಯದ ಬಳಿಕ ಕೌಂಟಿಯಲ್ಲಿ ಆಡಲು ತೆರಳಲಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನ 8 ಪಂದ್ಯಗಳಿಗೆ ಆಡಲು ರಹಾನೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದಾದ ಬಳಿಕ ಆಗಸ್ಟ್ 1 ರಿಂದ ಸೆಪ್ಟೆಂಬರ್ 16 ರವರೆಗೆ ನಡೆಯಲಿರುವ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಕೂಡ ಅವರು ಸಂಪೂರ್ಣವಾಗಿ ಭಾಗವಹಿಸಲಿದ್ದಾರೆ.

ಕಳೆದ ವರ್ಷ ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ರಹಾನೆ ಆಡಿದ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ. 2022ರ ಜನವರಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡ ಬಳಿಕ 34ರ ಹರೆಯದ ಅವರು ಭಾರತ ಪರ ಟೆಸ್ಟ್ ಪಂದ್ಯವನ್ನು ಆಡಿಲ್ಲ.

ಕಳೆದ ವರ್ಷ ರಹಾನೆ ಮತ್ತು ಚೇತೇಶ್ವರ ಪೂಜಾರ ಇಬ್ಬರನ್ನೂ ಕೂಡ ಟೆಸ್ಟ್ ತಂಡದಿಂದ ಕೈಬಿಡಲಾಗುತ್ತು. ಆದರೆ ಚೇತೇಶ್ವರ್ ಪೂಜಾರ ಕಳೆದ ವರ್ಷ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಸೆಕ್ಸ್ ಪರವಾಗಿ ಆಡಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದರು. ಹೀಗಾಗಿ ಭಾರತ ತಂಡದಲ್ಲಿ ಮರಳಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ರಹಾನೆ 2023ರ ರಣಜಿ ಟ್ರೋಫಿ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು ಕೌಂಟಿ ಕ್ರಿಕೆಟ್‌ನಲ್ಲಿ ಆಡಿ ತಮ್ಮ ಫಾರ್ಮ್ ಪ್ರದರ್ಶಿಸಲು ಸಜ್ಜಾಗಿದ್ದಾರೆ.

ಲೀಸೆಸ್ಟರ್‌ಶೈರ್‌ಗೆ ಸಹಿ ಮಾಡಿದ ಬಳಿಕ ರಹಾನೆ ಪ್ರತಿಕ್ರಿಯೆ ನೀಡಿದ್ದಾರೆ "ಮುಂಬರುವ ಋತುವಿನಲ್ಲಿ ಲೀಸೆಸ್ಟರ್‌ಶೈರ್‌ಗೆ ಸೇರಲು ನನಗೆ ನಿಜವಾಗಿಯೂ ಸಂತೋಷವಾಗಿದೆ. ನನ್ನ ಹೊಸ ತಂಡದ ಆಟಗಾರರೊಂದಿಗೆ ಆಡಲು ಮತ್ತು ಲುಸೆಸ್ಟರ್ ನಗರವನ್ನು ಸೇರಿಕೊಳ್ಳಲು ಉತ್ಸುಕವಾಗಿದ್ದೇನೆ" ಎಂದಿದ್ದಾರೆ ಅಜಿಂಕ್ಯಾ ರಹಾನೆ.