ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಬೈಕ್ ರ್ಯಾಲಿಯಲ್ಲಿ ಭಾಗಿ : ಬ್ರೆಜಿಲ್ ಅಧ್ಯಕ್ಷರಿಗೆ ದಂಡ

ಸಾವೋ ಪೌಲೋ: ಕೊರೋನಾ ಮಾರ್ಗ ಸೂಚಿಗಳನ್ನು ವಿರೋಧಿಸಿ ಬೈಕ್ ರ್ಯಾಲಿಯೊಂದರಲ್ಲಿ ಪಾಲ್ಗೊಂಡ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಅವರಿಗೆ ಅಲ್ಲಿನ ಸರ್ಕಾರ ದಂಡ ವಿಧಿಸಿದೆ.
ಸಾವೋ ಪೌಲೋದಲ್ಲಿ ಬೊಲ್ಸನಾರೋ ಪಾಲ್ಗೊಂಡಿದ್ದ ಮೋಟಾರ್ ಸೈಕಲ್ ರ್ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಕೊರೊನಾ ಸಾಂಕ್ರಾಮಿಕ ಮಾರ್ಗಸೂಚಿಗಳನ್ನು ಪಾಲನೆ ಮಾಡಿರಲಿಲ್ಲ.
ಜೈರ್ ಬೊಲ್ಸನಾರೋ ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸಿದ್ದು, ಮಾಸ್ಕ್ ಧರಿಸಿರಲಿಲ್ಲ. ಅವರ ಜೊತೆ ರ್ಯಾಲಿಯಲ್ಲಿ ಪಾಲ್ಗೊಂಡಿದ್ದವರೂ ಕೂಡಾ ಮಾರ್ಗಸೂಚಿ ಪಾಲನೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ನೂರು ಡಾಲರ್ ದಂಡ ವಿಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಬ್ರೆಜಿಲ್ ಸರ್ಕಾರ ಕೊರೊನಾ ನಿಯಮಗಳ ಉಲ್ಲಂಘನೆಗೆ ಮೇ 2020ರಿಂದ ದಂಡ ವಿಧಿಸುತ್ತಿದೆ.