ಕುಮಾರಸ್ವಾಮಿ ಪುತ್ರನಾಗಿ ಹುಟ್ಟಿದ್ದು ನನ್ನ ಭಾಗ್ಯ ಎಂದ ನಿಖಿಲ್

ರಾಮನಗರ: ದೇವೇಗೌಡರ ಕುಟುಂಬದಲ್ಲಿ ಜನಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಕುಮಾರಸ್ವಾಮಿ ಪುತ್ರನಾಗಿ ಹುಟ್ಟಿದ್ದು ನನ್ನ ಭಾಗ್ಯ ಎಂದು ಹೇಳುತ್ತಾ ನಿಖಿಲ್ ಕುಮಾರಸ್ವಾಮಿ ಭಾವುಕರಾದರು. ಚನ್ನಪಟ್ಟಣದಲ್ಲಿ 20 ವರ್ಷ ಆಡಳಿತ ನಡೆಸಿದವರು ಏನೂ ಮಾಡಲಿಲ್ಲ. ಭಗೀರಥ ಎಂದು ಹೇಳಿಕೊಂಡು ಓಡಾಡುತ್ತಾರೆ ಅಷ್ಟೇ. ನಿಜವಾದ ಭಗೀರಥ ಎಂದರೆ ಕುಮಾರಣ್ಣ. ಚನ್ನಪಟ್ಟಣಕ್ಕೆ ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಣ್ಣ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.