ಕುಂದಾಪುರ: ಜೀವವಿಲ್ಲದ ಕಾಂಗ್ರೆಸನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸಬೇಕು- ಸಿಟಿ ರವಿ

ಕುಂದಾಪುರ: ಜೀವವಿಲ್ಲದ ಕಾಂಗ್ರೆಸನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸಬೇಕು- ಸಿಟಿ ರವಿ

ಕುಂದಾಪುರ: ಬೈಂದೂರು ಕ್ಷೇತ್ರ ಬಿಜೆಪಿಯ ಭದ್ರಕೋಟೆ ಆಗಿದೆ 5 ವರ್ಷಗಳಲ್ಲಿ ಬೈಂದೂರು ಕ್ಷೇತ್ರಕ್ಕೆ ಬಿಜೆಪಿ ನೀಡಿದ ಅನುದಾನ ಕಾಂಗ್ರೆಸ್ ಪಕ್ಷ 50 ವರ್ಷಗಳಲ್ಲಿ ಕೊಟ್ಟಿಲ್ಲ ಸಮಾವೇಶದಲ್ಲಿ ಜನಸ್ತೋಮ ಸೇರುವುದರ ಮೂಲಕ ಬಿಜೆಪಿ ಪಕ್ಷದ ತಾಕತ್ತು ಪ್ರದರ್ಶನಗೊಂಡಿದೆ ಕಾಂಗ್ರೆಸ್ ಪಕ್ಷ ಬೈಂದೂರು ಕ್ಷೇತ್ರವನ್ನು ಗೆಲ್ಲುವ ನಿರೀಕ್ಷೆಯನ್ನು ಕೈಬಿಡಿ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.

ಬೈಂದೂರು ಕ್ಷೇತ್ರದ ಹೊಸಾಡು ಮುಳ್ಳಿಕಟ್ಟೆ ನಗುಸಿಟಿ ಮೈದಾನದಲ್ಲಿ ಸೋಮವಾರ ನಡೆದ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಶೌಚಾಲಯದ ನಿರ್ಮಾಣ, ರೈಲ್ವೆ ಕ್ಷೇತ್ರ ಅಭಿವೃದ್ಧಿ, ಬಡವರಿಗೆ ಗ್ಯಾಸ್ ವಿತರಣೆ, ರೈತಪರ ಯೋಜನೆಗಳ ಮುಖಾಂತರ ಡಬಲ್ ಇಂಜಿನ್ ಸರಕಾರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ನಾವು ಎಲೆಕ್ಷನ್ ಹಿಂದುಗಳು ಅಲ್ಲಾ ನಿಜವಾದ ಹಿಂದುಗಳು ಹಿಂದುತ್ವಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದ ಅಭಿವೃದ್ಧಿ ಕೆಲಸಗಳಿಗೆ ಮಾತ್ರವಲ್ಲದೆ ಸಾಂಸ್ಕ್ರತಿಕ ಅಭಿವೃದ್ಧಿಗೂ ಮನ್ನಣೆ ಕೊಟ್ಟಿದೆ ಗಂಗಾರತಿಗೆ ರಾಷ್ಟ್ರೀಯ ಸ್ಥಾನಮಾನವನ್ನು ಕೊಟ್ಟಿರುವ ಮೋದಿ ಸರಕಾರ ಕಾಶಿಕಾರಿಡರ್, ಸೋಮನಾಥ ಕಾರಿಡಾರ್ ಅಭಿವೃದ್ಧಿಗೊಳಿಸಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ನಡೆಯುತ್ತಿದೆ ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಹೇಳುವ ಕಾಂಗ್ರೆಸ್ ಪಕ್ಷಕ್ಕೆ ರಾಮನ ಚರಿತ್ರೆ ಗೊತ್ತಿಲ್ಲ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಸಿಂಧೂರದ ತೀಲಕವನ್ನು ಇಟ್ಟುಕೊಳ್ಳುತ್ತಿದೆ ಎಂದು ಲೇವಡಿ ಮಾಡಿದರು.

ಜೀವ ಇಲ್ಲದ ಹೆಣವನ್ನು ಸ್ಮಶಾನಕ್ಕೆ ಕೊಂಡು ಹೋಗಲಾಗುತ್ತದೆ ಅಸ್ತಿತ್ವವನ್ನು ಕಳೆದುಕೊಂಡಿದ್ದ ಜೀವವಿಲ್ಲದ ಕಾಂಗ್ರೆಸನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸಬೇಕು ಎಂದು ಸಿಟಿ ರವಿ ಹೇಳಿದರು.

ಯಾರ ಹಂಗಿಲ್ಲದೆ ಪೂರ್ಣ ಬಹುಮತವುಳ್ಳ ಸರಕಾರ ರಚನೆ ಮಾಡಲು ಬಿಜೆಪಿಗೆ ಮತಗಳನ್ನು ನೀಡಿ ಎಂದು ನುಡಿದರು. ಪರಶುರಾಮ ಸೃಷ್ಟಿಯ ಕ್ಷೇತ್ರದಲ್ಲಿ ಜಾತಿ ಭೇದ ನಡೆಯುದಿಲ್ಲ ಇಲ್ಲಿ ಹಿಂದುತ್ವ ಮಾತ್ರ ನಡೆಯುತ್ತದೆ ಎಂದರು.