ಕಾಂಗ್ರೆಸ್ ಪಕ್ಷದ ಬುಡ ಅಲ್ಲಾಡಿಬಿಟ್ಟು 3 ವರ್ಷ ಕಳೆದಿದೆ: ಸಚಿವ ಆರ್. ಆಶೋಕ್ ವಾಗ್ದಾಳಿ

ಕಾಂಗ್ರೆಸ್ ಪಕ್ಷದ ಬುಡ ಅಲ್ಲಾಡಿಬಿಟ್ಟು 3 ವರ್ಷ ಕಳೆದಿದೆ: ಸಚಿವ ಆರ್. ಆಶೋಕ್ ವಾಗ್ದಾಳಿ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಖುಷಿ ತಂದಿದೆ. ಕಳೆದ ಬಾರಿಗಿಂತ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಅಶೋಕ್, ಹೆಚ್.ಡಿ.

ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಕಿತ್ತಾಟ ನಡೆಸಿದ್ದಾರೆ. ನಾವು ಅಂಪೈರ್ ಆಗಿ ಕೆಲಸ ಮಾಡುತ್ತಿದ್ದೇವೆ. ಅವರಿಬ್ಬರೂ ಹೇಗೆ ಕಿತ್ತಾಡುತ್ತಾರೆ ಎಂದು ನಾವು ತೀರ್ಪು ಕೊಡುತ್ತೇವೆ ಎಂದರು. ಇನ್ನು ಕಾಂಗ್ರೆಸ್ ಪಕ್ಷದ ಬುಡ ಅಲ್ಲಾಡಿಬಿಟ್ಟು ಮೂರು ವರ್ಷ ಕಳೆದಿದೆ. ಕಾಂಗ್ರೆಸ್ ನ್ನು ಜನರು ತಿರಸ್ಕರಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.