ಕಾಂಗ್ರೆಸ್‌ ವಿರೋಧ ಪಕ್ಷವಾಗಿ ಇರಲು ಲಾಯಕ್‌ ಇಲ್ಲ; ನಳಿನ್‌ ಕುಮಾರ್‌ ಕಟೀಲು ಟಾಂಗ್‌

ಕಾಂಗ್ರೆಸ್‌ ವಿರೋಧ ಪಕ್ಷವಾಗಿ ಇರಲು ಲಾಯಕ್‌ ಇಲ್ಲ; ನಳಿನ್‌ ಕುಮಾರ್‌ ಕಟೀಲು ಟಾಂಗ್‌

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಹತ್ರ ಬರುತ್ತಿದೆ.ಮೂರು ರಾಜಕೀಯ ಪಕ್ಷಗಳು ಪ್ರಚಾರದ ಅಬ್ಬರದ ಜೊತೆಗೆ ತಂತ್ರ-ಪ್ರತಿತಂತ್ರ ಹೆಣೆಯುತ್ತಿವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಿಜೆಪಿಯವರನ್ನು ಜೈಲಿಗೆ ಕಳಿಸ್ತೀನಿ ಎಂಬ ಬಿ.ಕೆ ಹರಿಪ್ರಸಾದ್‌ ಹೇಳಿಕೆಗೆ ನಳಿನ್‌ ಕುಮಾರ್‌ ಕಟೀಲು ಟಾಂಗ್‌ ನೀಡಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಇಂದಿರಾ ಗಾಂಧಿ ಪಕ್ಷವನ್ನು ಮುಗಿಸಲು ಹೊರಟಿದ್ದರು. ಅಂದು ಯಾರೆಲ್ಲಾ ದ್ವೇಷ ಕಾರಿದ್ದರೂ ಅವರ್ಯಾರೂ ಇಂದು ಉಳಿದಿಲ್ಲ. ದೇಶದಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷವಾಗಿ ಇರಲು ಲಾಯಕ್‌ ಇಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕಟೀಲ್‌ ವಾಗ್ದಾಳಿ ನಡೆಸಿದ್ದಾರೆ.