ಕಲಬುರಗಿ ಹಲವೆಡೆ ಲಘು ಭೂಕಂಪನ: ಆತಂಕದಲ್ಲಿ ಜನತೆ

ಕಲಬುರಗಿ ಹಲವೆಡೆ ಲಘು ಭೂಕಂಪನ: ಆತಂಕದಲ್ಲಿ ಜನತೆ

ಲಬುರಗಿ: ಕಲಬುರಗಿ ಜಿಲ್ಲೆಯ ಹಲವೆಡೆ ಲಘು ಭೂಕಂಪನ ಸಂಭವಿಸಿದೆ.ಇದರಿಂದ ಬೆಚ್ಚಿಬಿದ್ದ ಜನರು ಹೊರಗೆ ಬಂದಿದ್ದಾರೆ.

ಇಂದು ಬೆಳಗ್ಗೆ 9.48 ರ ಸಮಯದಲ್ಲಿ 5 ಸೆಕೆಂಡ್‌ ಭೂಮಿ ಕಂಪಿಸಿದೆ.ರಿಕ್ಟರ್‌ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿದೆ.

ಬೆನಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದೆ. ಕಲಬುರಗಿ ಸೇಡಂ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನವಾಗಿರುವುದು ತಿಳಿದುಬಂದಿದೆ.

ಜೋರಾದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಕಾರಣ, ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಅಲ್ಲದೇ ಕೆಲ ಕಾಲ ಮನೆಯ ಹೊರಗಡೆ ಆತಂಕದಲ್ಲಿ ಕಾಲ ಕಳೆದಿರೋದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.