ಕರ್ತವ್ಯದ ವೇಳೆ ಮೃತಪಡುವ ಪೊಲೀಸ್ ಸಿಬ್ಬಂದಿಗಳ ಕುಟುಂಬಕ್ಕೆ 20 ಲಕ್ಷ ವಿಮೆ : ರಾಜ್ಯ ಸರ್ಕಾರದಿಂದ ಆದೇಶ

ಕರ್ತವ್ಯದ ವೇಳೆ ಮೃತಪಡುವ ಪೊಲೀಸ್ ಸಿಬ್ಬಂದಿಗಳ ಕುಟುಂಬಕ್ಕೆ 20 ಲಕ್ಷ ವಿಮೆ : ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : 2022-23ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯದ ಮೇಲಿರುವಾಗ ಮೃತಪಟ್ಟಲ್ಲಿ ಮೃತರ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ.20.00 ಲಕ್ಷಗಳನ್ನು ವಿಮಾ ಕಂಪನಿಯ ಮೂಲಕ ಪಡೆಯಲು ರಾಜ್ಯ ಸರ್ಕಾರ ಮಂಜೂರಾತಿ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದಲ್ಲಿ 2022-23ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯ ಅನುಯಾಯಿ (FOLLOWER) ಪೊಲೀಸ್ ಪೇದೆ (PC) ಮುಖ್ಯ ಪೇದೆ (H.C), ಸಹಾಯಕ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ASI), ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI), ಪೊಲೀಸ್ ಇನ್ಸಪೆಕ್ಟರ್ (PI), ಹುದ್ದೆಯವರಿಗೆ ಒಟ್ಟು 93,013 ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಮೇಲಿರುವಾಗ (24X7) ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟಲ್ಲಿ ಮೃತರ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ.20.00 ಲಕ್ಷಗಳನ್ನು ವಿಮಾ ಕಂಪನಿಯ ಮೂಲಕ ಪಡೆಯಲು ಮಂಜೂರಾತಿ ಆದೇಶ ಹೊರಡಿಸಿದೆ.

ಅಧಿಕಾರಿಗಳು ಮೃತರ ಕುಟುಂಬದವರಿಗೆ (ಕಾನೂನುಬದ್ಧ ವಾರಸುದಾರರಿಗೆ) ವಿಮಾ ಪರಿಹಾರ ಮೊತ್ತ ರೂ.20.00 ಲಕ್ಷಗಳನ್ನು ಮಂಜೂರು ಮಾಡುವ ಸಂಬಂಧ, ವಿವರವಾದ ವರದಿಯೊಂದಿಗೆ 15 ದಿನಗಳ ಒಳಗೆ ಕೈಂ ಫಾರಂ ಅನ್ನು ಭರ್ತಿ ಮಾಡಿ, ಸೂಚಿಸಿರುವ ದಾಖಲೆಗಳನ್ನು ಘಟಕಾಧಿಕಾರಿಗಳೇ ಖುದ್ದು ದೃಢೀಕರಿಸಿ ನೇರವಾಗಿ 'ಸೀನಿಯರ್ ಡಿವಿಜನಲ್ ಮ್ಯಾನೇಜರ್, M/s. United India Insurance Co Ltd., Divisional Office-XV. No.2, IFCI Bhavan, 3d Floor, Cubbonpet Main Road, N.R. Square, Near City Corporation, Next to Ulsorgate Police Station. BENGALURU-560 002. do SPEED POST ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿದೆ.

ಘಟಉಧಿಕಾರಿಗಳು ಕರ್ತವ್ಯದ ಮೇಲಿರುವಾಗ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಯ ಮಾಹಿತಿಯನ್ನು ನಿಗಧಿತ ಸಮಯದೊಳಗೆ ವಿಮಾ ಕಂಪನಿಗೆ ಕಳುಹಿಸುವುದು ಕಡ್ಡಾಯವಾಗಿರುತ್ತದೆ. ವಿಮಾ ಕಂಪನಿಗೆ ಮಾಹಿತಿ/ದಾಖಲೆಗಳನ್ನು ಸಲ್ಲಿಸದೇ ವಿನಾಕಾರಣ ವಿಳಂಬ ಮಾಡಿದಲ್ಲಿ ಸಂಬಂಧಪಟ್ಟ ಘಟಕಾಧಿಕಾರಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.