ಕರೊನಾ ರೋಗಿಗಳನ್ನು ನೋಡುತ್ತಲೇ ಸುಸ್ತಾಗಿ ಕುಸಿದುಬಿದ್ದ ಡಾಕ್ಟರ್​: ವಿಡಿಯೋ ವೈರಲ್

ಕರೊನಾ ರೋಗಿಗಳನ್ನು ನೋಡುತ್ತಲೇ ಸುಸ್ತಾಗಿ ಕುಸಿದುಬಿದ್ದ ಡಾಕ್ಟರ್​: ವಿಡಿಯೋ ವೈರಲ್

ವದೆಹಲಿ: ಚೀನಾದಲ್ಲಿ ಕೋವಿಡ್​ನ ಹೊಸ ವೇರಿಯಂಟ್ ಹಾವಳಿ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದು, ಎರಡು ದಿನಗಳಿಂದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಮಧ್ಯೆ ಕರೊನಾ ರೋಗಿಗಳನ್ನು ನೋಡಿನೋಡಿ ಸುಸ್ತಾಗಿ ವೈದ್ಯರೊಬ್ಬರು ಕುಸಿದು ಬಿದ್ದ ಪ್ರಸಂಗವೂ ನಡೆದಿದೆ.

ಚೀನಾದ ಆಸ್ಪತ್ರೆಯ ಮಹಡಿಯೊಂದರಲ್ಲಿ ಮೇಲಿಂದ ಮೇಲೆ ಬರುತ್ತಲೇ ಇದ್ದ ರೋಗಿಗಳನ್ನು ನೋಡಿ ಚಿಕಿತ್ಸೆ ನೀಡಿ ನೀಡಿ ಸುಸ್ತಾದ ವೈದ್ಯರೊಬ್ಬರು ಕುರ್ಚಿಯಲ್ಲಿ ಕುಳಿತಲ್ಲೇ ಕೆಳಕ್ಕೆ ಕುಸಿದಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಕ್ಷಣವೇ ಮಹಿಳೆಯೊಬ್ಬಳು ನೆರವಿಗೆ ಧಾವಿಸಿದ್ದು, ಬಳಿಕ ಉಳಿದ ಡಾಕ್ಟರನ್ನು ಕೂಗಿ ಕರೆದಿದ್ದಳು. ಇತರ ವೈದ್ಯರು ಕೂಡಲೇ ಧಾವಿಸಿ ಸಿಪಿಆರ್ ಮಾಡಿ ಚಿಕಿತ್ಸೆ ನೀಡುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಚೀನಾದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೋಂಕಿತರಾಗುತ್ತಿರುವುದು, ಸ್ಮಶಾನಗಳಲ್ಲೂ ಜಾಗ ಇಲ್ಲದಂತಾಗುತ್ತಿರುವುದರ ಜತೆ ಈಗ ವೈದ್ಯರೂ ಚಿಕಿತ್ಸೆ ನೀಡಲಾಗದೆ ಕುಸಿದಂಥ ಪ್ರಕರಣ ಮತ್ತಷ್ಟು ಆತಂಕ ಮೂಡಿಸಿದೆ.