ದೆಹಲಿಯನ್ನಾವರಿಸಿದ ದಟ್ಟ ಮಂಜು: ಕಡಿಮೆ ಗೋಚರತೆಯಿಂದ ವಿಮಾನ ಪ್ರಯಾಣದಲ್ಲಿ ವಿಳಂಬ
ನವದೆಹಲಿ: ದಟ್ಟವಾದ ಮಂಜಿನಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಐಜಿಐ) ಹೊರಡಬೇಕಿದ್ದ ಆರು ವಿಮಾನಗಳು ತಡವಾಗಿವೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ/ಕಠ್ಮಂಡು, ದೆಹಲಿ-ಚಂಡೀಗಢ-ಕುಲು, ದೆಹಲಿ-ಜೈಪುರ, ದೆಹಲಿ-ಧರ್ಮಶಾಲಾ-ಚಂಡೀಗಢ, ದೆಹಲಿ-ಶಿಮ್ಲಾ- ಧರ್ಮಶಾಲಾ, ದೆಹಲಿ-ಡೆಹ್ರಾಡೂನ್ ವಿಮಾನ ಮಾರ್ಗಗಳಲ್ಲಿ ತೀವ್ರ ಮಂಜು ಆವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವರ್ಷದ ಆರಂಭದಿಂದಲೂ ಶೀತದ ಅಲೆಗೆ ದೆಹಲಿ ತತ್ತರಿಸಿದೆ. ಸಫ್ದರ್‌ಜಂಗ್‌ನಲ್ಲಿ ಇಂದು ಬೆಳಗ್ಗೆ 6.10ರ ಸುಮಾರಿಗೆ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಪಾಲಮ್‌ನಲ್ಲಿ ಗೋಚರತೆ 100 ಮೀಟರ್‌ನಲ್ಲಿ ಬೆಳಿಗ್ಗೆ 6.10 ಕ್ಕೆ ದಾಖಲಾಗಿದೆ.
ಮುನ್ಸೂಚನೆಯಂತೆ, ಪಂಜಾಬ್, ವಾಯವ್ಯ ರಾಜಸ್ಥಾನ, ಜಮ್ಮು ವಿಭಾಗ, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ತ್ರಿಪುರದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕಂಡುಬಂದಿದೆ.