ಒಳ ಒಪ್ಪಂದದ ಅನಿವಾರ್ಯತೆ ಜೆಡಿಎಸ್ ಗಿದೆ: ರಮೇಶ್ ಬಾಬು

ಒಳ ಒಪ್ಪಂದದ ಅನಿವಾರ್ಯತೆ ಜೆಡಿಎಸ್ ಗಿದೆ: ರಮೇಶ್ ಬಾಬು

ಬೆಂಗಳೂರು: ಒಳ ಒಪ್ಪಂದದ ಅನಿವಾರ್ಯತೆ ಜೆಡಿಎಸ್ ಗೆ ಇದೆ ಹೊರತು, ಕಾಂಗ್ರೆಸ್ ಗಿಲ್ಲ. ಹಾಗಾಗಿ, ಅದು ಇವತ್ತಿಗೂ ಬಿಜೆಪಿಯ ‘ಬಿ’ ಟೀಮ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ತಿರುಗೇಟು ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದ್ಮನಾಭನಗರದಲ್ಲಿ ಸಚಿವ ಅಶೋಕ್ ಜತೆ, ಈ ಹಿಂದೆ ಬೆಂಗಳೂರು ದಕ್ಷಿಣದಲ್ಲಿ ಕೇಂದ್ರ ಮಾಜಿ ಸಚಿವ ಅನಂತಕುಮಾರ್ ಜತೆ ಯಾವ ರೀತಿ ಹೊಂದಾಣಿಕೆ ಮಾಡಿಕೊಂಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ಯಾವಾಗಲೂ ಈ ಹೊಂದಾಣಿಕೆ ಅಥವಾ ಒಪ್ಪಂದದ ಅನಿವಾರ್ಯತೆ ಇರುವುದು ಜೆಡಿಎಸ್ ಗೆ ಎಂದು ಹೇಳಿದರು.

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ನಡುವಿನ ಸಂಬಂಧ ಚೆನ್ನಾಗಿದೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ನೀಡಿರುವ ಹೇಳಿಕೆಗೆ ರಮೇಶ್ ಬಾಬು ಈ ಪ್ರತಿಕ್ರಿಯೆ ನೀಡಿದರು.