ಏ.19ರಂದು ಚನ್ನಪಟ್ಟಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ : ಮಾಜಿ ಸಿಎಂ HDK ಹೇಳಿಕೆ

ಏ.19ರಂದು ಚನ್ನಪಟ್ಟಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ : ಮಾಜಿ ಸಿಎಂ HDK ಹೇಳಿಕೆ

ರಾಮನಗರ: ಕಳೆದ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದೆ. ಈ ಬಾರಿಯೂ ಷಡ್ಯಂತ್ರ ನಡೆಯುತ್ತಿದೆ 2 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ. ಆದ್ರೇ ನಾನು ಈ ಬಾರಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದೇನೆ. ಏಪ್ರಿಲ್ 19ರಂದು ಚನ್ನಪಟ್ಟಣ ಕ್ಷೇತ್ರದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಘೋಷಣೆ ಮಾಡಿದರು.

ರಾಮನಗರದ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಳೆದ ಬಾರಿ ಒತ್ತಡ ಹೆಚ್ಚಾಗಿತ್ತು. ನೀವು ಅರ್ಜಿ ಹಾಕಿ, ನಾನು ನೋಡಿಕೊಳ್ಳುತ್ತೇವೆ ಅಂತ ಭರವಸೆ ಕೊಟ್ರಿ. ಆಗಲೂ ನನ್ನ ಗೆಲ್ಲಿಸಿದ್ದು ಚನ್ನಪಟ್ಟಣ ಕ್ಷೇತ್ರದ ಜನರು ಗೆಲ್ಲಿಸಿದರು ಎಂಬುದಾಗಿ ತಿಳಿಸಿದರು.

ಈ ಬಾರಿ ಎರಡು ಕ್ಷೇತ್ರದಿಂದ ಸ್ಪರ್ಧಇಸೋದಿಲ್ಲ. ಚನ್ನಪಟ್ಟಣ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲಿದ್ದೇನೆ. ಏಪ್ರಿಲ್ 19ರಂದು ಚನ್ನಪಟ್ಟಣದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಏಪ್ರಿಲ್ 20, 21ರಂದು ಎರಡು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತೇನೆ. ಆ ನಂತ್ರ ರಾಜ್ಯದ ಇತರೆ ಕ್ಷೇತ್ರಗಳಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತೇನೆ. ಏಪ್ರಿಲ್ 17ರಂದು ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ನಾಮಪತ್ರ ಸಲ್ಲಿಸಲಿದ್ದಾನೆ ಎಂದರು.

ಈ ಬಾರಿಯೂ ಷ್ಯಡ್ಯಂತ್ರ ನಡೆಯುತ್ತಿದೆ ಎರಡು ಕಡೆ ಸ್ಪರ್ಧೆ ನಡೆಸಿ ಎಂದು ಹೇಳುತ್ತಿದ್ದಾರೆ. ಆದ್ರೇ ನಾನು ಈ ಬಾರಿ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಚನ್ನಪಟ್ಟಣದಿಂದ ವಿಧಾನಸಭಾ ಚುನಾವಣೆ ನಾಮಪತ್ರವನ್ನು ಏಪ್ರಿಲ್ 19ರಂದು ಸಲ್ಲಿಸುವೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಶಕ್ತಿ ದೊಡ್ಡದಿದೆ. ಈ ಕ್ಷೇತ್ರದ ನಜುರು ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ನೋಡುವ ಆಸೆ ಪಡುತ್ತಿದ್ದಾರೆ ಎಂದರು.

ಮೈತ್ರಿ ಸರ್ಕಾರದ ಸಂದರ್ಭದಲ್ಲಿ ದೊಡ್ಡ ಸವಾಲುಗಳಿದ್ದವು. ಕಾಂಗ್ರೆಸ್ ಒತ್ತಡದ ನಡುವೆಯೂ ನಾನು ಉತ್ತಮ ಆಡಳಿತ ನಡೆಸಿದ್ದೇನೆ. ಆಗ ಚನ್ನಪಟ್ಟಣದ ಕಡೆ ಗಮನಕೊಡ್ತಿಲ್ಲ ಎಂದು ಅಪಪ್ರಚಾರ ಮಾಡಿದ್ರು. ಕ್ರಿಕೆಟ್ ಬೆಟ್ಟಿಂಗ್ ಧಂದೆ ಮಟ್ಟ ಹಾಕಿದ್ದೇನೆ ಎಂದು ತಿಳಿಸಿದರು.