ಎಂಜಿನಿಯರ್‌ಗಳೇ ಹುಷಾರ್..‌ !ಬೆಂಗಳೂರಿನಲ್ಲಿ ಇನ್ಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಸಂಬಳಕ್ಕೆ ಬೀಳುತ್ತೆ ಕತ್ತರಿ

ಎಂಜಿನಿಯರ್‌ಗಳೇ ಹುಷಾರ್..‌ !ಬೆಂಗಳೂರಿನಲ್ಲಿ ಇನ್ಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಸಂಬಳಕ್ಕೆ ಬೀಳುತ್ತೆ ಕತ್ತರಿ

ಬೆಂಗಳೂರು: ನಗರದಲ್ಲಿ ಎಲ್ಲಿಂದರಲ್ಲಿ ರಸ್ತೆ ಅಗೆದಿದ್ದು, ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆ ಆಗಿದೆ. ಸೀದಾ ಹೋಗುವ ರಸ್ತೆಯಲ್ಲಿ ಇದೀಗ ಸುತ್ತಿ ಬಳಸಿ ಓಡಾಡುವಂತೆ ಆಗಿದೆ.

ಇದೀಗ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ. ನಗರದಲ್ಲಿ ಇನ್ಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಎಂಜಿನಿಯರ್‌ಗಳ ಸಂಬಳವನ್ನೇ ಕಟ್‌ ಮಾಡಲು ಬಿಬಿಎಂಪಿ ನಿರ್ಧರಿಸಿದೆ.ಹೌದು. ಅನುಮತಿ ಇಲ್ಲದೇ ರಸ್ತೆ ಅಗೆಯಲು ಅವಕಾಶ ಕೊಟ್ಟರೆ ವಾರ್ಡ್ ಎಂಜಿನಿಯರ್‌ಗಳ ಸಂಬಳ ಕಟ್ ಮಾಡುವುದಾಗಿ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್‌ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪಾಲಿಕೆ ಅನುಮತಿ ಇಲ್ಲದೇ ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿಯವರು ರಸ್ತೆ ಅಗೆದು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಅಗೆದಿರುವ ರಸ್ತೆ ಸರಿಪಡಿಸಬೇಕು. ಅನುಮತಿ ಇಲ್ಲದೇ ರಸ್ತೆ ಅಗೆಯುವುದಕ್ಕೆ ಅವಕಾಶ ಕೊಡಬಾರದು ಎಂದು ಸೂಚಿಸಿದ್ದಾರೆ.
ಅನುಮತಿ ಇಲ್ಲದೇ ರಸ್ತೆ ಅಗೆಯುವುದಕ್ಕೆ ಅವಕಾಶ ಕೊಟ್ಟರೆ ವಾರ್ಡ್ ಎಂಜಿನಿಯರ್‌ಗಳ ಸಂಬಳ ಕಟ್‌ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ