ಉತ್ತರಕರ್ನಾಟಕದಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನ ಪ್ರಸಿದ್ಧಿ; ಸ್ವಾಮೀಜಿ ಆತ್ಮಕ್ಕೆ ಶಾಂತಿ ಸಿಗಲಿ; ಮುರುಘರಾಜೇಂದ್ರ ಸ್ವಾಮಿ

ಶಿವಮೊಗ್ಗ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಪ್ರವಚನ ಎಂದರೆ ಸಿದ್ದೇಶ್ವರ ಸ್ವಾಮಿಗಳು ಎನ್ನುವಂತೆ ಇದ್ದ ಅವರ ಅಗಲಿಕೆ ಆಘಾತ ತಂದಿದೆ.
ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೆಕ್ಕಿನ ಕಲ್ಮಠದ ಪೀಠಾಧಿಪತಿಗಳಾದ ಡಾ.ಮುರುಘರಾಜೇಂದ್ರ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಪ್ರಸಿದ್ಧಿ ಪಡೆದಿದ್ದರು. ಅವರ ಪ್ರವಚನ ಕೇಳಲು ಹಳ್ಳಿ ಹಳ್ಳಿಗಳಿಂದಲೂ ಸಹ ಜನ ಗಾಡಿ, ಟ್ರ್ಯಾಕ್ಟರ್ಗಳಲ್ಲಿ ಬಂದು ಕೇಳುತ್ತಿದ್ದರುಸಭೆ ಸಮಾರಂಭಗಳಲ್ಲಿ ಶಿಸ್ತು ಹೇಗಿರಬೇಕು ಎಂದು ಅವರನ್ನು ನೋಡಿ ಕಲಿಯಬೇಕಿತ್ತು ಎಂದರು.ಸಿದ್ದೇಶ್ವರ ಶ್ರೀಗಳ ಪ್ರವಚನ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ 7 ಗಂಟೆಗೆ ಮುಕ್ತಾಯವಾಗುತ್ತಿತ್ತು. ಇದರಿಂದ ಜನ ಪ್ರವಚನ ಕೇಳಲು 5 ಗಂಟೆಗೆ ಬಂದು ಕುಳಿತುಕೊಳ್ಳುತ್ತಿದ್ದರು. ಪ್ರವಚನ ಸಮಯದಲ್ಲಿ ಎಷ್ಟು ಶಾಂತಿ ಇರುತ್ತಿತ್ತು ಎನ್ನುವುದನ್ನು ನಾವು ಮರೆಯಲು ಆಗಲ್ಲ ಎಂದರು .