ಉಡುಪಿ: ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ ಬಸ್ ನಿರ್ವಾಹಕನಿಗೆ ಬಿತ್ತು ಗೂಸಾ

ಉಡುಪಿ: ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ ಬಸ್ ನಿರ್ವಾಹಕನಿಗೆ ಬಿತ್ತು ಗೂಸಾ

ಉಡುಪಿ: ಕಾಲೇಜು ವಿದ್ಯಾರ್ಥಿನಿಯರಿಗೆ ಅಸಭ್ಯ ರೀತಿಯಲ್ಲಿ ಉಪಟಳ ಮಾಡುತ್ತ ಖಾಸಗಿ ಬಸ್ ನ‌ ನಿರ್ವಾಹಕನೋರ್ವನಿಗೆ ವಿದ್ಯಾರ್ಥಿನಿಯರು ಬಿಸಿ ಬಿಸಿ ಕಜ್ಜಾಯ ನೀಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಖಾಸಗಿ ಬಸ್ ನ‌ ಕಂಡಕ್ಟರ್ ಉಪೇಂದ್ರ ಎನ್ನುವಾತ ಉಡುಪಿ ಸಂತೆಕಟ್ಟೆಯ ನರ್ಸಿಂಗ್ ಕಾಲೇಜ್ ಬಳಿ, ತನ್ನ ಸ್ಕೂಟಿಯಲ್ಲಿ ಬಂದು ಅಲ್ಲಿನ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದ, ಮಾತ್ರವಲ್ಲದೆ ಕೈಸನ್ನೆ, ಕಣ್ ಸನ್ನೆ ಮಾಡುತ್ತ ಯುವತಿಯರ ಜೊತೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಈತನ ಉಪಟಳ ಗಮನಿಸಿದ ಕಾಲೇಜು ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಬಸ್ ಕಂಡಕ್ಟರ್ ನನ್ನು ಅಟ್ಟಾಡಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡ ಆತ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ನಂತರ ವಿದ್ಯಾರ್ಥಿನಿಯರು ಆತನಿಗೆ ಸರಿಯಾಗಿ ಕಜ್ಜಾಯ ನೀಡಿ, ಉಡುಪಿ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.