ಈಜು ಹೊಂಡದಲ್ಲಿ ಮುಳುಗಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಸಾವು

ಈಜು ಹೊಂಡದಲ್ಲಿ ಮುಳುಗಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಸಾವು

ಬೆಂಗಳೂರು ಗ್ರಾಮಾಂತರ : ಈಜಲು ತೆರಳಿದ್ದ ಬಾಲಕ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಾಯಕನಹಳ್ಳಿಯ ಮೊರಾರ್ಜಿ ವಸತಿ ಶಾಲೆ ಬಳಿ ನಡೆದಿದೆ.

ಮೃತ ಬಾಲಕನನ್ನು ಜುನೈದ್ (13) ಎಂದು ಗುರುತಿಸಲಾಗಿದೆ.

ಮಕ್ಕಳನ್ನು ನೋಡಿಕೊಳ್ಳಲು ಮೇಲ್ವಿಚಾರಕನನ್ನು ನೇಮಿಸಿ ಶಿಕ್ಷಕರು ಪ್ರವಾಸಕ್ಕೆ ತೆರಳಿದ್ದರು. ಈ ಮೇಲ್ವಿಚಾರಕ 6 ಮಂದಿ ಮಕ್ಕಳನ್ನು ಕರೆದುಕೊಂಡು ಈಜಲು ಹೋಗಿದ್ದನು.

ನೀರಿನ ಹೊಂಡಕ್ಕೆ ಈಜಲು ಇಳಿದ ಆರು ವಿದ್ಯಾರ್ಥಿಗಳ ಪೈಕಿ ಜುನೈದ್ (13) ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ, ಈ ಸಂಬಂಧ ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.