ಇವರು ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂವಂತೆ! ಅಂದಹಾಗೆ ಇವರ ಆಸ್ತಿ ಎಷ್ಟು ಗೊತ್ತಾ?

ಇವರು ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂವಂತೆ! ಅಂದಹಾಗೆ ಇವರ ಆಸ್ತಿ ಎಷ್ಟು ಗೊತ್ತಾ?
ಮ್ಮ ಜನರು ಮಾತಾಡೋದು ಕೇವಲ ಇಬ್ಬರ ಬಗ್ಗೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ಒಂದು ಅತ್ಯಂತ ಶ್ರೀಮಂತ ವ್ಯಕ್ತಿಯ (Richest Man) ಬಗ್ಗೆ ಮತ್ತು ಅವನ ಆಸ್ತಿ ಪಾಸ್ತಿಯ (Asset) ಬಗ್ಗೆ ತುಂಬಾನೇ ಗೌರವಯುತವಾಗಿ ಮಾತಾಡುತ್ತಾರೆ. ಇನ್ನೊಂದು ಕಡು ಬಡವನ (Poor Man) ಬಗ್ಗೆ ಮಾತಾಡುತ್ತಾರೆ ಅಂತ ಹೇಳಬಹುದು.
ಅದರಲ್ಲೂ ಆ ಶ್ರೀಮಂತ ವ್ಯಕ್ತಿ ನಮ್ಮ ಭಾರತ (India) ದೇಶದವನಾಗಿದ್ದೂ (Nation), ಬೇರೆ ದೇಶದಲ್ಲಿ ನೆಲೆಸಿದ್ದಾರೆಂದರೆ ಮುಗಿದೇ ಹೋಯಿತು. ಅವನನ್ನು ಹಾಡಿ ಹೊಗಳಿದ್ದೆ ಹೊಗಳಿದ್ದು, ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಇಲ್ಲಿಯೂ ಸಹ ನಾವು ಮಾತನಾಡಲು ಹೊರಟಿರುವುದು ಒಬ್ಬ ಶ್ರೀಮಂತ ವ್ಯಕ್ತಿಯ ಬಗ್ಗೆ ಅಂತ ಹೇಳಬಹುದು.

ಈ ವ್ಯಕ್ತಿ ಪಾಕ್ ನ ಅತ್ಯಂತ ಶ್ರೀಮಂತ ಹಿಂದೂ ಅಂತೆ..

ಈ ಶ್ರೀಮಂತ ವ್ಯಕ್ತಿ ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಈ ವ್ಯಕ್ತಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ವ್ಯಕ್ತಿಯಂತೆ ಅಂತ ಹೇಳಲಾಗುತ್ತಿದೆ.

ಪಾಕಿಸ್ತಾನವು ಈ ದಿನಗಳಲ್ಲಿ ತುಂಬಾನೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಆ ದೇಶದಲ್ಲಿ ಇದೀಗ ಹಿಟ್ಟು, ಅಕ್ಕಿ, ಮೊಟ್ಟೆ ಮುಂತಾದ ಅಗತ್ಯ ಆಹಾರ ಪದಾರ್ಥಗಳ ಕೊರತೆ ಅಲ್ಲಿನ ಜನರಿಗೆ ತುಂಬಾನೇ ಕಾಡುತ್ತಿದೆ.

ಸಾಮಾನ್ಯ ನಾಗರಿಕರು ಈ ಆಹಾರ ಪದಾರ್ಥಗಳನ್ನು ಖರೀದಿಸಲು ತಮ್ಮೊಳಗೆ ಹೋರಾಟ ನಡೆಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಪಾಕಿಸ್ತಾನದ ಹಿಂದೂಗಳನ್ನು ಪಾಕಿಸ್ತಾನದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಪರಿಗಣಿಸುವಲ್ಲಿ ಪಾಕಿಸ್ತಾನವು ವಿಶ್ವದಾದ್ಯಂತ ಕುಖ್ಯಾತವಾಗಿದೆ.


ದೀಪಕ್ ಪೆರ್ವಾನಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ



ಆದರೆ ಈ ಎಲ್ಲಾ ಕಷ್ಟಗಳ ಹೊರತಾಗಿಯೂ, ಕೆಲವು ಹಿಂದೂಗಳು ತಮ್ಮ ಹೆಸರನ್ನು ರೂಪಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈಗ ಈ ವ್ಯಕ್ತಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಪರಿಗಣಿಸಲ್ಪಟ್ಟಿದ್ದಾರೆ. ಈ ಲೇಖನದಲ್ಲಿ ಪಾಕಿಸ್ತಾನದ ಮಿಲಿಯನೇರ್ ಮತ್ತು ಶ್ರೀಮಂತ ಹಿಂದೂ ಆದ ದೀಪಕ್ ಪೇರ್ವಾನಿ ಅವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

;Pakistani Actress: ಭಾರತೀಯ ವಧುವಿನಂತೆ ಉಡುಪು ಧರಿಸಿದ್ದಕ್ಕಾಗಿ ಟ್ರೋಲ್ ಆದ್ರು ಪಾಕಿಸ್ತಾನಿ ನಟಿ!

ದೀಪಕ್ ಪೇರ್ವಾನಿ ಪ್ರಸಿದ್ದ ಫ್ಯಾಷನ್ ಡಿಸೈನರ್

ಪಾಕಿಸ್ತಾನದ ಮಿರ್‌ಪುರ್ ಖಾಸ್ ನಲ್ಲಿ 1973 ರಲ್ಲಿ ಜನಿಸಿದ ದೀಪಕ್ ಪೇರ್ವಾನಿ ಒಬ್ಬ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು ನಟ.

ದೀಪಕ್ ಪೇರ್ವಾನಿ ಪಾಕಿಸ್ತಾನದ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದವರು. ಅವರು ಪಾಕಿಸ್ತಾನದ ಫ್ಯಾಷನ್ ಉದ್ಯಮದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2022 ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅವರ ವಾರ್ಷಿಕ ನಿವ್ವಳ ಮೌಲ್ಯವು ಸುಮಾರು 71 ಕೋಟಿ ರೂಪಾಯಿ ಆಗಿದೆ.ಪಕ್ ಪೇರ್ವಾನಿ ಒಬ್ಬ ನಟ ಕೂಡ ಆಗಿದ್ದಾರೆ..

ದೀಪಕ್ ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗುವುದರೊಂದಿಗೆ ಚಿತ್ರ ನಟ ಸಹ ಆಗಿದ್ದಾರೆ ಅಂತ ಹೇಳಬಹುದು. ದೀಪಕ್ ಅವರು ಜನಪ್ರಿಯ ಪಾಕಿಸ್ತಾನಿ ಹಮ್ ಟಿವಿಯಲ್ಲಿ ಪ್ರಸಾರವಾದ ಧಾರಾವಾಹಿಗಳಾದ ಮೇರೆ ಪಾಸ್ ಪಾಸ್ ಮತ್ತು ಕಡೂರತ್ (2013) ನಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ 2017 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ 'ಪಂಜಾಬ್ ನಹೀ ಜಾಹುಂಗಿ ಚಿತ್ರದಲ್ಲೂ ದೀಪಕ್ ಅವರು ನಟಿಸಿದ್ದಾರೆ.

ದೀಪಕ್ ಪೆರ್ವಾನಿ ಸೋದರ ಸಂಬಂಧಿ ನವೀನ್ ಪೆರ್ವಾನಿ

ನವೀನ್ ಪೆರ್ವಾನಿ ಅವರು ಅಕ್ಟೋಬರ್ 30, 1971 ರಲ್ಲಿ ಜನಿಸಿದರು. ನವೀನ್ ಪಾಕಿಸ್ತಾನದ ಸ್ನೂಕರ್ ಆಟಗಾರ. 2006ರಲ್ಲಿ ಕತಾರ್ ನ ದೋಹಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ನವೀನ್ ಪಾಕಿಸ್ತಾನ ರಾಷ್ಟ್ರವನ್ನು ಪ್ರತಿನಿಧಿಸಿದ್ದರು. ನವೀನ್ ಅವರು ದೀಪಕ್ ಅವರ ಸೋದರ ಸಂಬಂಧಿ ಅಂತ ಹೇಳಲಾಗುತ್ತಿದೆ.