ಇನ್ಸ್ ಪೆಕ್ಟರ್ ವಿರುದ್ಧ ಲಂಚ ಆರೋಪ : ಇಬ್ಬರು ಕಾನ್ಸ್ ಟೇಬಲ್ ಗಳು ಸಸ್ಪೆಂಡ್

ಇನ್ಸ್ ಪೆಕ್ಟರ್ ವಿರುದ್ಧ ಲಂಚ ಆರೋಪ : ಇಬ್ಬರು ಕಾನ್ಸ್ ಟೇಬಲ್ ಗಳು ಸಸ್ಪೆಂಡ್

ಬೆಂಗಳೂರು : ಇನ್ಸ್​ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿ ರಾಷ್ಟ್ರಪತಿ ಪ್ರಧಾನಿಗೆ ಪತ್ರ ಬರೆದ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ಗಳನ್ನು ಅಮಾನತು ಮಾಡಲಾಗಿದೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶರಣಗೌಡ ಪಬ್ ಮತ್ತು ಬಾರ್ ನಿಂದ ಮಾಮೂಲಿ ಪಡೆಯುತ್ತಾರೆ ಎಂದು ಇಬ್ಬರು ಕಾನ್ಸ್ ಟೇಬಲ್ ಗಳು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆದಿದ್ದರು

ಆದರೆ ಪ್ರಾಥಮಿಕ ತನಿಖೆಯಲ್ಲಿ ಇದು ಸುಳ್ಳು ಆರೋಪ ಎಂದು ಸಾಬೀತಾದ ಹಿನ್ನೆಲೆ ಕಾನ್ಸ್​ಟೇಬಲ್​ಗಳಾದ​ ಶಿವಕುಮಾರ್ ಹಾಗೂ ವಿಜಯ್ ರಾಥೋಡ್​ರನ್ನು ಅಮಾನತು ಮಾಡಲಾಗಿದ್ದು, ಮಲ್ಲೇಶ್ವರಂ ಠಾಣೆಯ ಎಸಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರೆದಿದೆ.