ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆ ʻಅಪಘಾತʼವಷ್ಟೇ: ಉತ್ತರಾಖಂಡ್ ಸಚಿವರ ವಿವಾದಾತ್ಮಕ ಹೇಳಿಕೆ

ಡೆಹ್ರಾಡೂನ್: ಹುತಾತ್ಮತೆ ಗಾಂಧಿ ಕುಟುಂಬದ ಸ್ವತ್ತಲ್ಲ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆಗಳು 'ಅಪಘಾತ' ಎಂದು ಉತ್ತರಾಖಂಡ್ ಕ್ಯಾಬಿನೆಟ್ ಸಚಿವ ಗಣೇಶ್ ಜೋಶಿ ಮಂಗಳವಾರ ಹೇಳಿದ್ದಾರೆ.
ತಮ್ಮ ಜನ್ಮದಿನದಂದು ಇಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜೋಶಿ, ʻರಾಹುಲ್ ಗಾಂಧಿಯವರ ಬುದ್ಧಿಮತ್ತೆಯ ಬಗ್ಗೆ ನನಗೆ ಕರುಣೆ ಇದೆ.
ರಾಜ್ಯದ ಕೃಷಿ, ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಸೈನಿಕ ಕಲ್ಯಾಣ ಸಚಿವರಾಗಿರುವ ಜೋಶಿ, ರಾಹುಲ್ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿಯವರ ಯಾತ್ರೆ ಸುಗಮವಾಗಿ ಮುಗಿಸಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ. ಈ ಶ್ರೇಯ ಪ್ರಧಾನಿಯವರಿಗೆ ಸಲ್ಲುತ್ತದೆ, ಅವರ ನೇತೃತ್ವದಲ್ಲಿ 370 ನೇ ವಿಧಿಯನ್ನು ರದ್ದುಪಡಿಸದಿದ್ದರೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿಗೆ ಮರಳದಿದ್ದರೆ, ರಾಹುಲ್ ಗಾಂಧಿ ಅವರು ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಾಗುತ್ತಿರಲಿಲ್ಲ ಹೇಳಿದ್ದಾರೆ.
ವಾಸ್ತವವಾಗಿ, ಶ್ರೀನಗರದಲ್ಲಿ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಮುಗಿದ ನಂತರ ಮಾತನಾಡಿದ ರಾಹುಲ್, ʻಹಿಂಸಾಚಾರ ಸರಿ ಎಂದು ತಮ್ಮ ತಂದೆ ಮತ್ತು ಅಜ್ಜಿಯ ಹತ್ಯೆಯ ಬಗ್ಗೆ ಹೇಳಿದ್ದರು. ನಾನು ಅದನ್ನು ನೋಡಿದ್ದೇನೆ. ಹಿಂಸಾಚಾರವನ್ನು ಪ್ರಚೋದಿಸುವವರು, ಮೋದಿಜಿ, ಅಮಿತ್ ಶಾಜಿ, ಅಜಿತ್ ದೋವಲ್ಜಿ ಅವರಿಗೆ ನಮ್ಮ ನೋವು ಅರ್ಥವಾಗುವುದಿಲ್ಲʼ ಎಂದಿದ್ದರು.