ಆಸ್ಕರ್' ಗೆದ್ದ ಕುವರನಿಗೆ ಅಮಿತ್ ಶಾ ವಿಶೇಷ ಸನ್ಮಾನ

ತೆಲುಗಿನ RRR ಸಿನಿಮಾದ 'ನಾಟು ನಾಟು' ಹಾಡನ್ನು 'ಬೆಸ್ಟ್ ಒರಿಜಿನಲ್ ಸಾಂಗ್' ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ. ಇದೇ ಸಂತಸದಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ ಹಾಗೂ ಇವರ ಪುತ್ರ ರಾಮ್ ಚರಣ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ.ನಿನ್ನೆ ದೆಹಲಿಗೆ ತೆರಳಿದ್ದ ನಟ ರಾಮ್ ಚರಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ, ಅಮಿತ್ ಶಾರನ್ನ ಭೇಟಿ ಮಾಡಿದರು. ಈ ವೇಳೆ ಅಮಿತ್ ಶಾ ಅವರು ತ್ರಿಬಲ್ R ಸಿನಿಮಾದ 'ನಾಟು ನಾಟು' ಸಾಂಗ್ಗೆ ಆಸ್ಕರ್ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಕಂಗ್ರಾಟ್ಸ್ ಹೇಳಿ ಶುಭ ಹಾರೈಸಿದ್ದಾರೆ. ಅಲ್ಲದೇ ನಟ ರಾಮ್ ಚರಣ್ಗೆ ವಿಶೇಷವಾದ ಹೂಗುಚ್ಚ ನೀಡಿ, ಗುಲಾಬಿ ಬಣ್ಣದ ರೇಶ್ಮೆ ಶಾಲು ಹೊದಿಸಿ ಅಮಿತ್ ಶಾ ಅವರು ಸನ್ಮಾನಿಸಿದರು
ನಂತರ ರಾಮ್ ಚರಣ್ ಕೂಡ ಕೇಂದ್ರ ಸಚಿವರಿಗೆ ಸನ್ಮಾನಿಸಿದರು. ಇದಕ್ಕೆ ತಂದೆ ಚಿರಂಜೀವಿ ಸಾಥ್ ನೀಡಿದರು. ಬಳಿಕ ಮೂವರು ಕುಳಿತು ಕೆಲ ಸಮಯ ಸಿನಿಮಾ ಬಗ್ಗೆ ಚರ್ಚೆ ನಡೆಸಿದರು. ಅಮಿತ್ ಶಾ ಅವರು ಹೃದಯ ಪೂರ್ವಕವಾಗಿ ಸ್ವಾಗತಿಸಿ RRR ಸಿನಿಮಾ ಆಸ್ಕರ್ ವಿನ್ ಆಗಿದ್ದಕ್ಕೆ ಕಂಗ್ರಾಟ್ಸ್ ಹೇಳಿದರು ಎಂದು ಚಿರಂಜೀವಿ ಅವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ 'ಚಿತ್ರಪ್ರೇಮಿಗಳೇ' ವೀಕ್ಷಿಸಿ