ಅಭಿಷೇಕ್‌ ಅಂಬರೀಶ್ "ಕಾಳಿ" ಚಿತ್ರಕ್ಕೆ ಕಾಂತಾರ ಬೆಡಗಿ ಸಪ್ತಮಿ ಗೌಡ ನಾಯಕಿ ?

ಅಭಿಷೇಕ್‌ ಅಂಬರೀಶ್ "ಕಾಳಿ" ಚಿತ್ರಕ್ಕೆ ಕಾಂತಾರ ಬೆಡಗಿ ಸಪ್ತಮಿ ಗೌಡ ನಾಯಕಿ ?

ಬೆಂಗಳೂರು: ಅಭಿಷೇಕ್‌ ಅಂಬರೀಷ್‌ ಅಭಿನಯದ ಕಾಳಿ ಚಿತ್ರಕ್ಕೆ ಕಾಂತಾರ ಚಿತ್ರದ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಲಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದೆ. ಸಪ್ತಮಿ ಜೊತೆ ಒಂದು ಸುತ್ತಿನ ಮಾತುಕತೆಯಾಗಿದೆ. ಮೂರ್ನಾಲ್ಕು ದಿನಗಳಲ್ಲಿ ನಾಯಕಿ ಆಯ್ಕೆ ಅಂತಿಮವಾಗಲಿದೆ ಎಂದು ನಿರ್ದೇಶಕ ಕೃಷ್ಣ ತಿಳಿಸಿದ್ದಾರೆ. ಅಭಿಷೇಕ್‌ ಅಭಿನಯದ ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಚಿತ್ರೀಕರಣ ವಿಳಂಬವಾಗಿದ್ದರಿಂದ ಕಾಳಿ ಸ್ವಲ್ಪ ಮುಂದಕ್ಕೆ ಹೋಗಿದೆ. ಬ್ಯಾಡ್‌ ಮ್ಯಾನರ್ಸ್‌ನ‌‌ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ.