ಅನುಕಂಪದ ಆಧಾರ'ದ ಮೇಲಿನ ನೇಮಕಾತಿ ಬಗ್ಗೆ ಮಹತ್ವದ ಮಾಹಿತಿ: ಇನ್ಮುಂದೆ ಇವರಿಗೂ 'ಸರ್ಕಾರಿ ನೌಕರಿ' ಲಭ್ಯ

ಅನುಕಂಪದ ಆಧಾರ'ದ ಮೇಲಿನ ನೇಮಕಾತಿ ಬಗ್ಗೆ ಮಹತ್ವದ ಮಾಹಿತಿ: ಇನ್ಮುಂದೆ ಇವರಿಗೂ 'ಸರ್ಕಾರಿ ನೌಕರಿ' ಲಭ್ಯ

ಬೆಂಗಳೂರು: ಈಗಾಗಲೇ ಅನುಕಂಪದ ಆಧಾರದ ಮೇಲೆ ನೇಮಕಾತಿಯನ್ನು ಸೇವೆಯಲ್ಲಿದ್ದಾಗಲೇ ಮೃತಪಟ್ಟಂತ ನೌಕರನ ಕುಟುಂಬಸ್ಥರಿಗೆ ನೀಡಲಾಗುತ್ತಿದೆ. ವಿವಾಹಿತ, ಅವಿವಾಹಿತ ಸರ್ಕಾರಿ ನೌಕರನ ಕುಟುಂಬಸ್ಥರಿಗೆ ಅಲ್ಲವೇ, ಇನ್ಮುಂದೆ ವಿಚ್ಚೇದಿತ ಸರ್ಕಾರಿ ನೌಕರರ ಪತ್ನಿ, ಪತಿಯ ಅವಲಂಬಿತರಿಗೆ, ಮಕ್ಕಳಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಲಾಗುತ್ತದೆ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ವಿಚ್ಚೇದಿತ ಪುರಷ, ಮಹಿಳಾ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟ ಸಂದರ್ಭಗಳಲ್ಲಿ ಹಾಗೂ ಅವರಿಗೆ ಮಕ್ಕಳಿಲ್ಲದಿದ್ದಲ್ಲಿ, ಅಂತಹ ಸರ್ಕಾರಿ ನೌಕರರನ್ನು ಅವಿವಾಹಿತ ಸರ್ಕಾರಿ ನೌಕರರಿಗೆ ಸಮವಾಗಿ ಪರಿಗಣಿಸುವಂತೆ ತಿಳಿಸಿದ್ದಾರೆ.

ಇನ್ನೂ ಮೃತ ಸರ್ಕಾರಿ ನೌಕರರ ಮೇಲೆ ಅವಲಂಬಿತರಾಗಿದ್ದ ಹಾಗೂ ಅವರೊಂದಿಗೆ ವಾಸಿಸುತ್ತಿದ್ದ ಅವರ ಸಹೋದರ, ಸಹೋದರಿಗೆ ನಿಯಮಗಳ ಇತರೆ ಷರತ್ತು, ನಿಬಂಧನೆಗಳನ್ನು ಪೂರೈಸುವ ಷರತ್ತಿಗಳೊಪಟ್ಟು, ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸಬಹುದಂದೆ ಸ್ಪಷ್ಟಕರಿಸಿದ್ದಾರೆ. ಜೊತೆಗೆ ಈ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿರುವ ದಿನಾಂಕ 09-04-2021ರಿಂದ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ