ಹಾವೇರಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 16 ಲಕ್ಷ ಹಣ ಜಪ್ತಿ

ಹಾವೇರಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 16 ಲಕ್ಷ ಹಣ ಜಪ್ತಿ

ಹಾವೇರಿ : ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 16 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡ ಘಟನೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾವೇರಿ ನಗರದ ಕೊಂಡವಾಡ ಗಲ್ಲಿ ನಿವಾಸಿ ನಟರಾಜ ಬಾಳಿಮಠ (44) ಶ್ರೀಕಂಠಯ್ಯ (40) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಿಗ್ಗಾಂವಿ ಕಡೆಯಿಂದ ಹಾವೇರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಹಣ ಸಾಗಿಸಲಾಗುತ್ತಿತ್ತು, ಬಂಕಾಪುರ ಟೋಲ್ ಪ್ಲಾಜಾ ಬಳಿ ಹಣ ಪತ್ತೆಯಾಗಿದೆ.

ವಿಜಯನಗರದ ಹೊಸಪೇಟೆಯಲ್ಲಿ ಭೂಕಂಪನ
ವಿಜಯನಗರ: ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಭೂಮಿ ಕಂಪಿಸಿದಂತ ಅನುಭವ ಉಂಟಾಗಿದೆ. ಭೂಕಂಪನದ ಅನುಭವದಿಂದಾಗಿ ಜನರು ಮನೆಯಿಂದ ಹೊರ ಓಡಿ ಬಂದು ಕೆಲ ಕಾಲ ಹೊರಗೆ ಆತಂಕದಲ್ಲಿ ಕಾಲ ಕಳೆದಂತ ಘಟನೆ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವಂತ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರವು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಇಂದು ಭೂಕಂಪನವಾಗಿದೆ. ಅಯ್ಯನಹಳ್ಳಿಯ 15 ರಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಕಂಪನ ಉಂಟಾದಂತೆ ವರದಿಯಾಗಿರೋದಾಗಿ ಹೇಳಿದೆ.

ಇಂದು ನಡೆದಂತ ಭೂಕಂಪನದ ತೀವ್ರತೆ ಅಷ್ಟೇನು ಇಲ್ಲದ ಕಾರಣ ಕಂಪನದ ಅನುಭವ ಜನರಲ್ಲಿ ಉಂಟಾಗಿದೆ. ಭೂಮಿ ಸಣ್ಣ ಪ್ರಮಾಣದಲ್ಲಿ ಕಂಪಿಸಿದಂತೆ ಆಗಿದ್ದು, ಜನರು ಮನೆಯಿಂದ ಹೊರ ಓಡಿ ಬಂದು ಕೆಲ ಕಾಲ ಆತಂಕದಲ್ಲಿ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸಾಂದರ್ಭಿಕ ಚಿತ್ರ