ಸಿನಿಮಾ ಶೂಟಿಂಗ್ ವೇಳೆ ಜನಪ್ರಿಯ ನಟ 'ವಿಜಯ್ ಆಂಟೋನಿ'ಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಸಿನಿಮಾ ಶೂಟಿಂಗ್ ವೇಳೆ ಜನಪ್ರಿಯ ನಟ 'ವಿಜಯ್ ಆಂಟೋನಿ'ಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಕೆಎನ್‌ಎನ್ಡಿಜಿಟಲ್ ಡೆಸ್ಕ್ : ಟಾಲಿವುಡ್'ನಲ್ಲಿ ಬಿಕ್ಷಗಾಡು ಚಿತ್ರದ ಮೂಲಕ ಜನಪ್ರಿಯರಾದ ನಟ ವಿಜಯ್ ಆಂಟನಿ ಅವ್ರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಭಿಕ್ಷಗಾಡು 2 ಚಿತ್ರದ ಶೂಟಿಂಗ್ ವೇಳೆ ನಟನಿಗೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದ್ಯ ಚಿತ್ರದ ಚಿತ್ರೀಕರಣ ಮಲೇಷ್ಯಾದಲ್ಲಿ ನಡೆಯುತ್ತಿದ್ದು, ಅಲ್ಲಿ ಶೂಟಿಂಗ್ ವೇಳೆ ವಿಜಯ್ ಆಂಟೋನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿತ್ರತಂಡ ಅವರನ್ನ ಮಲೇಷ್ಯಾದ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ದೋಣಿಯಲ್ಲಿ ದೃಶ್ಯವನ್ನ ಚಿತ್ರೀಕರಿಸುವಾಗ ಈ ಅಪಘಾತ ಸಂಭವಿಸಿದೆ ಎಂದು ತೋರುತ್ತದೆ. ವೇಗವಾಗಿ ಬಂದ ದೋಣಿಯೊಂದು ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆಂಟೋನಿ ಗಾಯಗೊಂಡಿದ್ದಾರಂತೆ. ಈ ಘಟನೆಯಿಂದ ವಿಜಯ್ ಆಂಟನಿ ಕುಟುಂಬ ಬೆಚ್ಚಿಬಿದ್ದಿದ್ದು, ಮಲೇಷ್ಯಾಕ್ಕೆ ತೆರಳಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.