ಸಿದ್ದರಾಮಯ್ಯ ಮೋದಿಗೆ ಹಿಟ್ಲರ್‌ಗೆ ಹೋಲಿಸಿದ ವಿಚಾರ: ಟೀಕೆಗಳನ್ನು ನಾನು ಸ್ವಾಗತ: ಸಿಎಂ ಬೊಮ್ಮಾಯಿ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಟೀಕೆಗಳನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
ನಗರದಲ್ಲಿ ಮಾತನಾಡಿದ ಅವರು, ಟೀಕೆಗಳನ್ನು ನಾನು ಮೆಟ್ಟಿಲುಗಳಾಗಿ ಮಾಡಿ ಯಶಸ್ಸು ಕಾಣುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಜನಮನ್ನಣೆಗೆ ಗಳಿಸಿದ ನಾಯಕ. ಪ್ರಧಾನಿ ಮೋದಿಯನ್ನು ಬೈದರೆ ಆಕಾಶಕ್ಕೆ ಉಗುಳಿದ ಹಾಗೆ ಆಗುತ್ತೆ. ಈ ಹಿಂದೆಯೂ ಮೋದಿಯನ್ನು ಸೋನಿಯಾ ಗಾಂಧಿ ಟೀಕೆ ಮಾಡಿದ್ದರು. ಆಗ ಮೋದಿಗೆ ವೋಟ್ ಜಾಸ್ತಿ ಆಯ್ತು, ಜನಮನ್ನಣೆ ಸಹ ಹೆಚ್ಚಾಯ್ತು. ಕಾಂಗ್ರೆಸ್ ನಾಯಕರು ಏನೇ ಹೇಳಿದರೂ ಜನ ನಮ್ಮ ಪರ ಇದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.