ಲೇಡಿಸ್ ಹಾಸ್ಟೆಲ್ ಮುಂದೆ ಆಟೋ ನಿಲ್ಲಿಸಿ ಖಾಸಗಿ ಅಂಗ ಪ್ರದರ್ಶಿಸಿದ ಚಾಲಕನಿಗೆ ಕಾದಿತ್ತು ಬಿಗ್ ಶಾಕ್
ತಿರುವನಂತಪುರ: ಲೇಡಿಸ್ ಹಾಸ್ಟೆಲ್ ಮುಂದೆ ಆಟೋ ನಿಲ್ಲಿಸಿ ಅಶ್ಲೀಲವಾಗಿ ವರ್ತಿಸಿದ ಚಾಲಕನನ್ನು ತಿರುವನಂತಪುರದ ಮ್ಯೂಸಿಯಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮುತ್ತುರಾಜ್ (47) ಎಂದು ಗುರುತಿಸಲಾಗಿದೆ. ಈತ ಮೂನ್ನಮೂಡು ವಟಿಯೂರ್ಕಾವಿನ ವಯಲಿಕಾಡದ ಚಂದ್ರಿಕಾ ಭವನದ ನಿವಾಸಿ.
ಪೊಲೀಸರ ಪ್ರಕಾರ ಆರೋಪಿ ಮುತ್ತುರಾಜ್ ತನ್ನ ಆಟೋರಿಕ್ಷಾದಲ್ಲಿ ಹಾಸ್ಟೆಲ್ಗೆ ತಲುಪಿದ್ದಾನೆ. ಬಳಿಕ ಮಹಡಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗ ಪ್ರದರ್ಶನ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ವಿದ್ಯಾರ್ಥಿಗಳು ಮುತ್ತುರಾಜ್ ಅವರ ಆಟೋರಿಕ್ಷಾ ನಂಬರ್ ಅನ್ನು ಬರೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ವಿದ್ಯಾರ್ಥಿಗಳು ಹಂಚಿಕೊಂಡ ಮಾಹಿತಿ ಆಧರಿಸಿ, ತನಿಖೆ ನಡೆಸಿ ಮುತ್ತುರಾಜ್ನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಬೇರೆ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಮ್ಯೂಸಿಯಂ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. (ಏಜೆನ್ಸೀಸ್)