ರಾಹುಲ್ ಗಾಂಧಿ ಹೊಸ ಲುಕ್..! ಗಡ್ಡ ಟ್ರಿಮ್ ಮಾಡಿ, ಕೇಂಬ್ರಿಡ್ಜ್ ವಿವಿಯಲ್ಲಿ ಉಪನ್ಯಾಸ, ನೆಟ್ಟಿಗರು ಫಿದಾ
ನವದೆಹಲಿ : ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ತಮ್ಮ ದಪ್ಪ ಗಡ್ಡದೊಂದಿಗೆ ಟ್ರೆಂಡ್ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ತಮ್ಮ ಹೊಸ ಲುಕ್ ನಲ್ಲಿ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಸುಮಾರು 170 ದಿನಗಳ ನಂತರ ಅವರು ತಮ್ಮ ಉದ್ದನೆಯ ಮುಖದ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
52 ವರ್ಷದ ಕಾಂಗ್ರೆಸ್ ನಾಯಕ ರಾಹುಲ್ ಕಳೆದ ಕೆಲ ದಿನಗಳ ಹಿಂದೆ 4 ಸಾವಿರ ಕಿಲೋ ಮೀಟರ್‌ಗಳಷ್ಟು ದೂರ ಭಾರತ್ ಜೋಡೋ ಯಾತ್ರೆಯ ಮೂಲಕ ಸಂಚಾರ ನಡೆಸಿ, ಎಲ್ಲರಗಮನ ಸೆಳೆದಿದ್ದರು
ಈ ಬೆನ್ನಲ್ಲೆ ಅವರು ಕ್ರೇಂಬ್ರಿಡ್ಜ್ ಜಡ್ಜ್ ಬಿಸಿನೆಸ್ ಸ್ಕೂಲ್‌ನಲ್ಲಿ ಲರ್ನಿಂಗ್ ಟು ಲಿಸನ್ ಇನ್ ಡಿ 21ನೇ ಸೆಂಚೂರಿ ವಿಷಯ ಕುರಿತು ಉಪನ್ಯಾಸ ನೀಡುವುದಕ್ಕಾಗಿ ತಮ್ಮ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯವನ್ನುದ್ದೇಶಿಸಿ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಟ್ವೀಟ್ ಮೂಲಕ ತಿಳಿಸಲಾಗಿದೆ. ರಾಹುಲ್ ಗಾಂಧಿ ಲುಕ್‌ಗೆ ನೆಟ್ಟಿಗರು ಫುಲ್ ಫೀದಾ ಆಗಿದ್ದಂತೂ ನಿಜ..