ರಾಮನಗರ ಜಿಲ್ಲೆಯಲ್ಲಿ ಘೋರ ದುರಂತ : ಕಾರು-ಬೈಕ್ ಡಿಕ್ಕಿಯಾಗಿ ತಂದೆ, ಮಗಳು ಸ್ಥಳದಲ್ಲೇ ಸಾವು

ರಾಮನಗರ ಜಿಲ್ಲೆಯಲ್ಲಿ ಘೋರ ದುರಂತ : ಕಾರು-ಬೈಕ್ ಡಿಕ್ಕಿಯಾಗಿ ತಂದೆ, ಮಗಳು ಸ್ಥಳದಲ್ಲೇ ಸಾವು

ರಾಮನಗರ : ರಾಮನಗರ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮಗಳನ್ನು ಶಾಲೆಗೆ ಬಿಡಲು ಹೋಗವಾಗ ಬೈಕ್ ಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ತಂದೆ,ಮಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಮನಗರ ಜಿಲ್ಲೆಯ ಮಾಗಡಿ ತಲೂಕಿನ ಸಾಬರಪಾಳ್ಯ ಬಳಿ ದುರಂತ ನಡೆದಿದ್ದು, ಕಲ್ಯಾ ಗ್ರಾಮದ ನಿವಾಸಿ ಯೋಗೇಶ್ (47) ಹಾಗೂ ಪುತ್ರಿ ಹರ್ಷಿತಾ (14) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಗಳನ್ನು ಬೈಕ್ ನಲ್ಲಿ ಶಾಲೆಗೆ ಬಿಡಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.