ಮೊಳಕಾಲ್ಮುರು| ಲಾರಿಗೆ ಸರಕು ವಾಹನ ಡಿಕ್ಕಿ: ಇಬ್ಬರ ಸಾವು

ಮೊಳಕಾಲ್ಮುರು: ತಾಲ್ಲೂಕಿನ ತಮ್ಮೇನಹಳ್ಳಿ ಬಳಿ 150 'ಎ' ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗಿವ ಜಾವ ಸರಕು ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದು ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೀಮಾಂಧ್ರದ ರಾಯದುರ್ಗ ತಾಲ್ಲೂಕು ಬೊಮ್ಮನಾಳ್ ಮಂಡಲ ಗೋವಿಂದವಾಡ ಗ್ರಾಮದ ದಾಸರಿ ಕೇಶಪ್ಪ (30) ಮತ್ತು ಯ ವಂಡ್ರಪ್ಪ (64) ಮೃತಪಟ್ಟವರು.
ಕುಮ್ಮರಿ ಸೋಮಣ್ಣ ಗಾಯಗೊಂಡಿದ್ದಾರೆ. ಅವರು ಸರಕು ವಾಹನದಲ್ಲಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿಯನ್ನು ಮಾರಾಟ ಮಾಡಲು ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತಿದ್ದರು.
ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.