ಮೈಸೂರು: ಅರಣ್ಯ ವೀಕ್ಷಕನ ಮೇಲೆ ಕಾಡಾನೆ ದಾಳಿ

ಮೈಸೂರು: ಅರಣ್ಯ ವೀಕ್ಷಕನ ಮೇಲೆ ಕಾಡಾನೆ ದಾಳಿ

ಮೈಸೂರು: ಗಸ್ತು ತಿರುಗುತ್ತಿದ್ದ ಅರಣ್ಯ ವೀಕ್ಷಕನ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಬೊಮ್ಮ ಎಂದು ಗುರುತಿಸಲಾಗಿದೆ.

ಅವರು ತಮ್ಮ ಸಹೋದ್ಯೋಗಿ ಮಧು ಕೆ ಅವರೊಂದಿಗೆ ಗಸ್ತು ಕರ್ತವ್ಯದಲ್ಲಿದ್ದಾಗ ಕಾಡು ಆನೆ ಅವರ ಮೇಲೆ ದಾಳಿ ಮಾಡಿದೆ. ದಾಳಿ ಮಾಡಿದ ಕಾಡು ಆನೆ ಬೊಮ್ಮನನ್ನು ತನ್ನ ಸೊಂಡಿಲಿನಲ್ಲಿ ಸುತ್ತಿ ಕಮರಿಗೆ ಎಸೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧು ಕೆ ಹೇಗೋ ದಾಳಿಯ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ದರು.

ಬೊಮ್ಮ ಅವರನ್ನು ಕಮರಿಯಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ಗಾಯಗೊಂಡಿದ್ದ ಬೊಮ್ಮ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.