ಕಾಪು ಸುಗ್ಗಿ ಮಾರಿಪೂಜೆ- ಅನ್ಯಮತಿಯರಿಗೆ ವ್ಯಾಪರ ವಹಿವಾಟಿಗೆ ಅವಕಾಶ ನೀಡಬೇಡಿ ಮನವಿ ಮಾಡಲು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರ ಜತೆ ವ್ಯವಸ್ಥಾಪನ ಸಮಿತಿ ಗರಂ

ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನದಲ್ಲಿ ಮನವಿ ನೀಡಲು ಅವಕಾಶವಿಲ್ಲವೇ ಎಂದು ಬೇಸರ ವ್ಯಕ್ತಪಡಿಸಿದ ಸಂಘಟನೆ ಕಾರ್ಯಕರ್ತರು
ಕಾಪು: ತುಳುನಾಡಿನ ಇತಿಹಾಸ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕಾಪು ಸುಗ್ಗಿ ಮಾರಿಪೂಜೆಯ ಜಾತ್ರೆಯಲ್ಲಿ ದೇವಸ್ಥಾನದ ವಠಾರದಲ್ಲಿ ಹಿಂದೂಯೇತರರಿಗೆ ವ್ಯಾಪರ ವಹಿವಾಟಿಗೆ ಅವಕಾಶ ನೀಡಬಾರದೆಂದು ಜಿಲ್ಲೆಯ ಹಿಂದೂ ಸಂಘಟನೆಯ ಪ್ರಮುಖರು ಇಂದು ಮನವಿ ನೀಡಲು ಬಂದಾಗ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತಿನ ಚಕಾಮಕಿ ನಡೆಸಿದ ಘಟನೆ ನಡೆಯಿತು.
ಸಂಘಟನೆಯವರು ಕೇವಲ ಕಾಪುವಿನ ಮಾರಿಪೂಜೆ ಸಮಯಲ್ಲಿ ಮನವಿ ಮಾಡುತ್ತೀರಿ ಉಳಿದ ದೇವಸ್ಥಾನಗಳ ಜಾತ್ರೆಯ ಸಮಯದಲ್ಲಿ ಎಲ್ಲಿ ಹೋಗಿರುತ್ತೀರಿ ನಮ್ಮನ್ನು ಇಲ್ಲಿ ಬೇರೆ ಸಮುದಾಯವರು ಪ್ರಶ್ನೆ ಮಾಡುತ್ತಾರೆ, ಕೋರ್ಟ್ ದೇವಸ್ಥಾನಕ್ಕೆ ನೋಟಿಸ್ ಕೂಡ ಮಾಡಿದೆ ಆವಾಗ ಯಾವ ಸಂಘಟನೆಯೂ ಇಲ್ಲಿ ಬರಲ್ಲ ದೇವಸ್ಥಾನದೊಳಗೆ ಏನು ಮಾಡಬೇಕೆಂದು ನಮಗೆ ಗೊತ್ತಿದೆ ನಾವೂ ಕೂಡ ಹಿಂದುಗಳು ಆರ್ ಎಸ್ ಎಸ್ ನಿಂದ ಬೆಳೆದು ಬಂದವರು ಹಿಂದೂಯೇತರರಿಗೆ ಅವಕಾಶ ಕಳೆದ ವರ್ಷವೂ ನೀಡಿಲ್ಲ ಮತ್ತು ಹಿಂದು ಸಂಘಟನೆಯವರು ಪ್ರತಿವರ್ಷ ಬಂದು ಮನವಿ ಮಾಡುವ ಅಗತ್ಯವಿಲ್ಲ ಎಂದು ಗುಡುಗಿದರು.
ಈ ವಿಚಾರಕ್ಕೆ ಸಂಬAಧಿಸಿದAತೆ ಸಂಘಟನೆಯ ಕಾರ್ಯಕರ್ತರು ಬೇಸರ ವ್ಯಕ್ತ ಪಡಿಸಿ ಸರ್ಕಾರದ ಅಧೀನದ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನದಲ್ಲಿ ಮನವಿ ಮಾಡಲು ಕೂಡ ಅವಕಾಶವಿಲ್ಲವೇ ಬಂದವರನ್ನು ಈ ರೀತಿಯಾಗಿ ಹೀಯಾಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ಹೊರ ಹಾಕಿ ಮನವಿ ಪತ್ರ ಅಧ್ಯಕ್ಷರಿಗೆ ಸಲ್ಲಿಸಿ ಹೊರನಡೆದರು.