ಭಾರತದ ಈ ಪ್ರತಿಭಾವಂತನಿಗೆ ಹೆಚ್ಚಿನ ಅವಕಾಶ ಸಿಗಲಿ ಎಂದ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿ ಈಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಏಕದಿನ ಮಾದರಿಯಲ್ಲಿ ಪರಾಕ್ರಮ ತೋರಿದ ಟೀಮ್ ಇಂಡಿಯಾ ಮೇಲೆ ಚುಟುಕು ಮಾದರಿಯಲ್ಲಿಯೂ ಹೆಚ್ಚಿನ ಕುತೂಹಲವಿದೆ. ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಆಟಗಾರ ರಾಹುಲ್ ತ್ರಿಪಾಠಿಗೆ ಹೆಚ್ಚಿನ ಅವಕಾಶ ದೊರೆಯಬೇಕು ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸಬಾ ಕರೀಮ್.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಇಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವುದಿಲ್ಲ. ಹಾಗಾಗಿ ಹೆಚ್ಚುವರಿ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯುವ ಅಗತ್ಯವಿಲ್ಲ ಎಂದಿದ್ದಾರೆ ಸಬಾ ಕರೀಮ್.
"ಭಾರತ ತಂಡದಲ್ಲಿ ವಾಶಿಂಗ್ಟನ್ ಸುಂದರ್ ಹಾಗೂ ಕುಲ್‌ದೀಪ್ ಯಾದವ್ ಹಾಗೂ ದೀಪಕ್ ಹೂಡಾ ಕೂಡ ಸ್ಪಿನ್ ಬೌಲಿಂಗ್ ನಡೆಸುವ ಕಾರಣ ಮೂರನೇ ಸ್ಪಿನ್ನರ್‌ನ ಅವಶ್ಯಕತೆಯಿಲ್ಲ. ಚಳಿಗಾಲದಲ್ಲಿ ರಾಂಚಿಯಲ್ಲಿ ಸ್ಪಿನ್ನರ್‌ಗಳು ಹೆಚ್ಚಿನ ನೆರವು ಪಡೆಯಲಿದ್ದಾರೆ ಎಂದು ಕೂಡ ನನಗೆ ಅನಿಸುವುದಿಲ್ಲ. ಇಲ್ಲಿನ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಬಹುದು ಯಾಕಂದರೆ ತೇವಾಂಶ ಹಾಗೂ ಗಟ್ಟಿ ಮೇಲ್ಮೈ ಇದಕ್ಕೆ ಕಾರಣ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸಬಾ ಕರೀಂ.
ಟಿ20 ಸರಣಿಯಲ್ಲಿಯೂ ಭಾರತದ ಮೇಲೆ ಸಮಾ ಕರೀಮ್ ವಿಶ್ವಾಸ: ಇನ್ನು ಟೀಮ್ ಇಂಡಿಯಾ ಏಕದಿನದಲ್ಲಿ ನೀಡಿರುವ ಪ್ರದರ್ಶನದ ಬಗ್ಗೆ ಸಬಾ ಕರೀಂ ಸಂತಸ ವ್ಯಕ್ತಪಡಿಸಿದ್ದು ಟಿ20 ಸರಣಿಯಲ್ಲಿಯೂ ಅಂಥಾದ್ದೇ ಪ್ರದರ್ಶನದ ನಿರೀಕ್ಷೆ ವ್ಯಕ್ತಪಡಿಸಿದರು. "ಏಕದಿನ ಸರಣಿಯಲ್ಲಿ ಭಾರತ ಅದ್ಭುತವಾಗಿ ಪ್ರದರ್ಶನ ನೀಡಿದೆ. ಟಿ20 ಸರಣಿಯಲ್ಲಿಯೂ ನಾನು ಅಂಥಾದ್ಧೇ ಪ್ರದರ್ಶನದ ನಿರೀಕ್ಷೆಯಲ್ಲಿದ್ದೇನೆ. ಭಾರತಕ್ಕೆ ದೊಡ್ಡ ಪೈಪೋಟಿ ನೀಡುವಷ್ಟು ಕಿವೀಸ್ ಪಡೆ ಬಲಿಷ್ಠವಾಗಿದೆ ಎನಿಸುತ್ತಿಲ್ಲ. ಈ ಹಂತದಲ್ಲಿ ಭಾರತದ ಆತ್ಮವಿಶ್ವಾಸ ಬಹಳ ಉತ್ತಮವಾಗಿದ್ದು ಟಿ20 ಸರಣಿಯಲ್ಲಿಯೂ ಏಕದಿನ ಮಾದರಿಯಲ್ಲಿ ಪಡೆದ ಯಶಸ್ಸು ಸಾಧಿಸಲು ಅವಕಾಶವಿದೆ" ಎಂದಿದ್ದಾರೆ ಸಬಾ ಕರೀಂ
ಮುಂದುವರಿದು ಮಾತನಾಡಿದ ಸವಾ ಕರೀಂ ಯುವ ಆಟಗಾರ ರಾಹುಲ್ ತ್ರಿಪಾಠಿಗೆ ಈ ಸರಣಿಯಲ್ಲಿ ಹೆಚ್ಚಿನ ಅವಕಾಶ ದೊರೆಯಬೇಕು ಎಂದಿದ್ದಾರೆ. "ನಾನು ಮೂರನೇ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿಗೆ ಹೆಚ್ಚಿನ ಅವಕಾಶ ದೊರೆಯಬೇಕು ಎಂದು ಬಯಸುತ್ತೇನೆ. ಯಾಕೆಂದರೆ ಆತ ತನ್ನ ಎರಡನೇ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದಾರೆ. ಉತ್ತಮ ಸ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅಂಥಾ ಬ್ಯಾಟರ್ ನಿಮ್ಮಲ್ಲಿ ಇರುವಾಗ ಹೆಚ್ಚಿನ ಬದಲಾವಣೆಯ ಅಗತ್ಯವಿರುವುದಿಲ್ಲ. ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ನಾಲ್ಕು ಹಾಗೂ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬಗ್ಗೆ ಅನುಮಾನವಿಲ್ಲ. ದೀಪಕ್ ಹೂಡಾ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿ" ಎಂದಿದ್ದಾರೆ ಸಬಾ ಕರೀಂ.
ಸ್ಕ್ವಾಡ್‌ಗಳು ಹೀಗಿದೆ
ಭಾರತ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಅರ್ಷ್‌ದೀಪ್ ಸಿಂಗ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್, ಪೃಥ್ವಿ ಶಾ
ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಲಾಕಿ ಫರ್ಗುಸನ್, ಇಶ್ ಸೋಧಿ, ಬ್ಲೇರ್ ಟಿಕ್ನರ್, ಜಾಕೋಬ್ ಡಫ್ಫಿ, ಮೈಕೆಲ್ ರಿಪ್ಪನ್, ಡೇನ್ ಕ್ಲೀವರ್, ಹೆನ್ರಿ ಶಿಪ್ಲಿ, ಬೆನ್ ಲಿಸ್ಟರ್