ಬೆಂಗಳೂರಿನಲ್ಲಿ ಮೋದಿ ಕಾರ್ಯಕ್ರಮ: ಎಲ್ಲೆಲ್ಲಿ? ಏನೇನು?

ಬೆಂಗಳೂರಿನಲ್ಲಿ ಮೋದಿ ಕಾರ್ಯಕ್ರಮ: ಎಲ್ಲೆಲ್ಲಿ? ಏನೇನು?

ಬೆಂಗಳೂರು: ಈ ತಿಂಗಳ​​​ 11ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಸಕಲ ಸಿದ್ಧತೆಗಳೂ ನಡೆದಿವೆ. ಬೆಂಗಳೂರಿನ ಐದು ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ.

ನವೆಂಬರ್​​​ 11, ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಎಚ್​​ಎಎಲ್​​ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ನಂತರ ರಸ್ತೆ ಸಂಚಾರದ ಮೂಲಕ 10.30ಕ್ಕೆ ವಿಧಾನಸೌಧ ತಲುಪುವರು. ಶಾಸಕರ ಭವನದ ಆವರಣದಲ್ಲಿ, ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಉಪಸ್ಥಿತಿಯಲ್ಲಿ, ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ. ನಂತರ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ, ಸಂತ ಶ್ರೀ ವಾಲ್ಮೀಕಿ ಪ್ರತಿಮೆಗೆ ಗೌರವ ಸಲ್ಲಿಸುವರು.

ನಂತರದ ಕಾರ್ಯಕ್ರಮವನ್ನು ಸುಮಾರು 10.42ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವ, ದಕ್ಷಿಣ ಭಾರತದ ಮೊದಲ ವಂದೇ ಭಾರತ್​​​ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಕ್ಸ್​​ಪ್ರೆಸ್​​​​​​ ರೈಲಿಗೆ ಮೋದಿ ಚಾಲನೆ ನೀಡುವರು. ವಂದೇ ಭಾರತ್​​​​ ಟ್ರೇನ್​​​ ಜತೆಗೆ ಭಾರತ್​​​ ಗೌರವ್​​ ಕಾಶಿ ದರ್ಶನ್​​​ ಕೂಡ ಪ್ಲಾಟ್​​ ನಂ. 7 ಮತ್ತು 8ರಲ್ಲಿ ಚಾಲನೆಗೊಳ್ಳಲಿದೆ.