ಬೀದರ್–ಬೆಂಗಳೂರು ಮಧ್ಯೆ ಹೆಚ್ಚುವರಿ ವಿಮಾನ- ಸ್ಟಾರ್ ಏರ್

ಬೀದರ್‌ನಿಂದ ಬೆಂಗಳೂರಿಗೆ ವಿಮಾನ ಸಂಚಾರ ಸೇವೆ ವಿಸ್ತರಿಸುವ ಸಂಬಂಧ ಸ್ಟಾರ್ ಏರ್‌ನ ಉನ್ನತ ಅಧಿಕಾರಿಗಳು ಇಂದು ಸಭೆ ನಡೆಸಿದರು. ಮಾರ್ಚ್ ವೇಳೆಗೆ ಬೀದರ್‌ನಿಂದ ಬೆಂಗಳೂರಿಗೆ ಬೆಳಿಗ್ಗೆ ವಿಮಾನ ಸಂಚಾರ ಆರಂಭಿಸಲು ಸಭೆಯಲ್ಲಿ ಸ್ಟಾರ್ ಏರ್‌ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಭೂಪಣ್ಣ ಅವರು ಒಪ್ಪಿಗೆ ಸೂಚಿಸಿದರು. 76 ಆಸನಗಳ ಎರಡು ಹೊಸ ವಿಮಾನ ಸಂಚಾರ ಆರಂಭಿಸುವ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು. ಬೀದರ್ ವಿಮಾನ ನಿಲ್ದಾಣದ ನಿರ್ದೇಶಕ ಅಮಿತಕುಮಾರ ಮಿಶ್ರಾ ಇದ್ದರು.