ಫೆ.11ರಂದು ಬಿಡುಗಡೆಯಾಗಲಿದೆ ದೀಪಿಕಾ, ಸಿದ್ಧಾಂತ್‌ ಅಭಿನಯದ 'ಗೆಹರಾಯಿಯಾ'

ಫೆ.11ರಂದು ಬಿಡುಗಡೆಯಾಗಲಿದೆ ದೀಪಿಕಾ, ಸಿದ್ಧಾಂತ್‌ ಅಭಿನಯದ 'ಗೆಹರಾಯಿಯಾ'

ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಚತುರ್ವೇದಿ ನಟಿಸಿರುವ 'ಗೆಹರಾಯಿಯಾ' ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.

ಜನವರಿ 25 ರಂದು ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಇದೀಗ ಫೆಬ್ರವರಿ 11ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಶಕುನ್‌ ಬಾತ್ರಾ ನಿರ್ದೇಶಿಸಿದ್ದ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ನಟಿಸಿದ್ದಾರೆ.

ದೀಪಿಕಾ ಪಡುಕೋಣೆ ಹುಟ್ಟುಹಬ್ಬದ ಪ್ರಯುಕ್ತ ಇಂದು(ಬುಧವಾರ) ಚಿತ್ರದ ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಚಿತ್ರದ ನಿರ್ಮಾಪಕ ಕರಣ್‌ ಜೋಹರ್‌ ಅವರು ಈ ಪೋಸ್ಟರ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ ಮತ್ತು ಸಿದ್ಧಾಂತ್‌ ನಡುವಿನ ಇಂಟಿಮೇಟ್‌ ದೃಶ್ಯಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.