ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಧರಣಿ

ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಧರಣಿ

ರಾಯಚೂರು: ಪಿಂಚಣಿದಾರರಿಗೆ 2017 ಜನವರಿಯಿಂದ ಪಿಂಚಣಿ ಪರಿಷ್ಕರಣೆ ಮಾಡಿ, ಏಳನೆಯ ವೇತನ ಆಯೋಗದ ಫಿಟ್‌ಮೆಂಟ್‌ ಪ್ರಕಾರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ನಿವೃತ್ತ ನೌಕರರು ಹೈದರಾಬಾದ್‌ ಮಾರ್ಗದಲ್ಲಿರುವ ಬಿಎಸ್‌ಎನ್‌ಎಲ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಎರಡು ದಿನಗಳವರೆಗೂ ಪ್ರತಿಭಟನೆ ನಡೆಸಲಾಗುವುದು. ಕೂಡಲೇ 2017ಪೂರ್ವಾನ್ವಯವಾಗುವಂತೆ ಪಿಂಚಣಿ ಪರಿಷ್ಕರಿಸಬೇಕು. ಕೇಂದ್ರವು ಸಂಘಟನೆ ಆದೇಶದ ಈಗ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಕೇಂದ್ರ ಸರಕಾರವು ಬೇಡಿಕೆಯನ್ನು ಈಡೇರಿಸದಿದ್ದರೆ ಹೋರಾಟವು ತೀವ್ರಸ್ವರೂಪ ಪಡೆದುಕೊಳ್ಳಲಿದೆ ಎಂದು ವಲಯ ಉಪಾಧ್ಯಕ್ಷ ಶರಣ ಬಸವ ಅರಳಿ ಹೇಳಿದರು.

ಬಸವರಾಜ ದೇವಕರ್, ಎಸ್. ವಿ. ಅರಳಿ, ಡಿ. ಸಿದ್ದಪ್ಪ, ಅಕ್ಬರ್ ಹುಸೇನ್, ಲಿಂಗಪ್ಪ, ರಾಮದಾಸ್, ರಷೀದ್ ಖಾನ್, ವಿ.ಪಿ.ಪಾಟೀಲ್, ಶ್ರೀನಿವಾಸ ಗಂಗಾವತಿ, ಮನೋಹರ ಬಡಿಗೇರ ಮತ್ತಿತರರು ಇದ್ದರು.