ಪಾಕ್‌ ನುಸುಳುಕೋರನನ್ನು ಹೊಡೆದುರುಳಿಸಿದ ಸೇನೆ; ಓರ್ವ ಅರೆಸ್ಟ್

ಪಾಕ್‌ ನುಸುಳುಕೋರನನ್ನು ಹೊಡೆದುರುಳಿಸಿದ ಸೇನೆ; ಓರ್ವ ಅರೆಸ್ಟ್

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಎರಡು ಪ್ರತ್ಯೇಕ ಪ್ರಯತ್ನಗಳನ್ನು ಬಿಎಸ್‌ಎಫ್ ಪಡೆ ವಿಫಲಗೊಳಿಸಿದೆ. ಓರ್ವ ಪಾಕ್‌ ಉಗ್ರನನ್ನು ಸೇನೆ ಹೊಡೆದುರುಳಿಸಿದ್ದು, ಮತ್ತೋರ್ವನನ್ನು ಬಂಧಿಸಿದೆ ಎಂದು ಗಡಿ ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದಾರೆ. ಜಮ್ಮುವಿನ ಅರ್ನಿಯಾ ಸೆಕ್ಟರ್ & ಸಾಂಬಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಉಗ್ರರ ಮೇಲೆ ಗುಂಡು ಹಾರಿಸುವ ಮೂಲಕ ಅವರ ಯತ್ನವನ್ನು ಬಿಎಸ್‌ಎಫ್ ಪಡೆ ವಿಫಲಗೊಳಿಸಿದೆ.