ಪಪುವಾ ನ್ಯೂಗಿನಿಯಾ ರಾಜಧಾನಿಯಲ್ಲಿ ಪ್ರಬಲ ಭೂಕಂಪ; 7.2 ತೀವ್ರತೆ ದಾಖಲು

ಪಪುವಾ ನ್ಯೂಗಿನಿಯಾ ರಾಜಧಾನಿಯಲ್ಲಿ ಪ್ರಬಲ ಭೂಕಂಪ; 7.2 ತೀವ್ರತೆ ದಾಖಲು

ಪೋರ್ಟ್ ಮೊರೆಸ್ಬಿ (ಪಾಪುವಾ ನ್ಯೂಗಿನಿಯಾ): ಪಪುವಾ ನ್ಯೂಗಿನಿಯಾದ ರಾಜಧಾನಿ ಪೋರ್ಟ್ ಮೊರೆಸ್ಬಿಯಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಪೋರ್ಟ್ ಮೊರೆಸ್ಬಿ ಓಷಿಯಾನಿಯಾದ ಪಪುವಾ ನ್ಯೂ ಗಿನಿಯಾದ ರಾಜಧಾನಿ ಮತ್ತು ದೊಡ್ಡ ನಗರವಾಗಿದೆ

ಪಪುವಾ ನ್ಯೂಗಿನಿಯಾದ ರಾಜಧಾನಿ ಪೋರ್ಟ್ ಮೊರೆಸ್ಬಿಯಲ್ಲಿ 02-04-2023 ರಂದು 23:34(IST)ಕ್ಕೆ ಭೂಮಿಯಿಂದ 80 ಕಿಮೀ ಆಳದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು NCS ಟ್ವೀಟ್‌ನಲ್ಲಿ ತಿಳಿಸಿದೆ.

ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.