ಪಂಜಾಬಿನಾದ್ಯಂತ 'ಅಮೃತಪಾಲ್ ಸಿಂಗ್' ಗಾಗಿ ಶೋಧ ಕಾರ್ಯಚರಣೆ, ಇದುವರೆಗೆ 78 ಮಂದಿ ಅರೆಸ್ಟ್ ; ಪೊಲೀಸ್ ಮಾಹಿತಿ

ಪಂಜಾಬಿನಾದ್ಯಂತ 'ಅಮೃತಪಾಲ್ ಸಿಂಗ್' ಗಾಗಿ ಶೋಧ ಕಾರ್ಯಚರಣೆ, ಇದುವರೆಗೆ 78 ಮಂದಿ ಅರೆಸ್ಟ್ ; ಪೊಲೀಸ್ ಮಾಹಿತಿ

ಪಂಜಾಬ್ : ಸ್ವಯಂ ಘೋಷಿತ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ನನ್ನು ಬಂಧಿಸುವ ಸಲುವಾಗಿ ರಾಜ್ಯದಾದ್ಯಂತ ಅನುಮಾನಾಸ್ಪದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೆ 78 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಅಮೃತಪಾಲ್ ಸಿಂಗ್ ಬಂಧನ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯಾದ್ಯಂತ ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಮಾಧ್ಯಮಗಳು ಅಮೃತಪಾಲ್ ಸಿಂಗ್ ಬಂಧನವಾಗಿದೆ ಎಂದು ವರದಿ ಮಾಡುತ್ತಿವೆ. ಆದರೆ ಈ ಬಗ್ಗೆ ಪೊಲೀಸರು ಸ್ಪಷ್ಟವಾದ ಮಾಹಿತಿಯನ್ನು ಹೊರ ಹಾಕಿಲ್ಲ.

ಕಳೆದ ತಿಂಗಳು ಅಮೃತಪಾಲ್ ಮತ್ತು ಅವರ ಬೆಂಬಲಿಗರಲ್ಲಿ ಅವರಲ್ಲಿ ಕೆಲವರು ಕತ್ತಿ ಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್‌ಗಳನ್ನು ಭೇದಿಸಿ ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿದ್ದರು. ಅಮೃತ್‌ಪಾಲ್‌ನ ಸಹಾಯಕರಲ್ಲಿ ಒಬ್ಬನ ಬಿಡುಗಡೆಗಾಗಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು ಎಂದು ವರದಿಯಾಗಿತ್ತು.