ನಾವು ಹೊಡೆದುರುಳಿಸಿದ ಅಪರಿಚಿತ ವಸ್ತು ಏಲಿಯನ್ಸ್​ಗೂ ಸಂಬಂಧಪಟ್ಟಿರಬಹುದು' ಎಂದ ಅಮೆರಿಕದ ಜನರಲ್​!

ನಾವು ಹೊಡೆದುರುಳಿಸಿದ ಅಪರಿಚಿತ ವಸ್ತು ಏಲಿಯನ್ಸ್​ಗೂ ಸಂಬಂಧಪಟ್ಟಿರಬಹುದು' ಎಂದ ಅಮೆರಿಕದ ಜನರಲ್​!

ವದೆಹಲಿ: ಉತ್ತರ ಅಮೆರಿಕಾದ ವಾಯುಪ್ರದೇಶದ ಮೇಲ್ವಿಚಾರಣೆ ಮಾಡುತ್ತಿರುವ ಅಮೆರಿಕದ ವಾಯುಪಡೆಯ ಜನರಲ್, ಭಾನುವಾರದಂದು ಅಪರಿಚಿತ ಯುಎಫ್​ಒ(ಅನ್​ನೋನ್​ ಫ್ಲಯಿಂಗ್​ ಆಬ್ಜೆಕ್ಟ್​) ಅಥವಾ ಅಪರಿಚಿತ ಹಾರುವ ವಸ್ತುಗಳ ಶೂಟ್-ಡೌನ್​ ನಂತರ ಅವು ಏಲಿಯನ್​ಗಳಿಗೂ ಸಂಬಂಧ ಪಟ್ಟಿರಬಹುದು, ಆ ಸಾಧ್ಯತೆಯನ್ನು ತಳ್ಳಿಹಾಕುಲು ಆಗುವುದಿಲ್ಲ ಎಂದು ಹೇಳಿದರು.

ಅವರು ಬಾಹ್ಯಾಕಾಶದಿಂದ ಬಂದ ಜೀವಿಗಳ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆಯೇ ಎಂದು ಕೇಳಿದಾಗ, ಜನರಲ್ ಗ್ಲೆನ್ ವ್ಯಾನ್ಹೆರ್ಕ್ ಹೇಳಿದರು 'ನಾನು ಇಂಟೆಲ್ ಸಮುದಾಯ ಮತ್ತು ಕೌಂಟರ್ ಇಂಟೆಲಿಜೆನ್ಸ್ ಸಮುದಾಯಕ್ಕೆ ಆ ವಿಚಾರವನ್ನು ಬಿಡುತ್ತೇನೆ. ನಾನು ಏನನ್ನೂ ತಳ್ಳಿಹಾಕಿಲ್ಲ' ಎಂದಿದ್ದಾರೆ

'ಈ ಹಂತದಲ್ಲಿ ನಾವು ಉತ್ತರ ಅಮೆರಿಕ ಬಳಿ ಬರುತ್ತಿರುವ ಪ್ರತಿಯೊಂದು ಸಂಭಾವ್ಯ ಬೆದರಿಕೆಯ ಬಗ್ಗೆ ನಾವು ಆಲೋಚನೆಗಳನ್ನು ಮುಂದುವರಿಸುತ್ತೇವೆ' ಎಂದು ಉತ್ತರ ಅಮೆರಿಕದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ (NORAD) ಮತ್ತು ನಾರ್ದರ್ನ್ ಕಮಾಂಡ್ ಮುಖ್ಯಸ್ಥ ವ್ಯಾನ್ಹೆರ್ಕ್ ಹೇಳಿದರು. (ಏಜೆನ್ಸೀಸ್)