ದೆಹಲಿಯ ಹಲವೆಡೆ ಮೋದಿ ವಿರೋಧಿ ಪೋಸ್ಟರ್: 44 ಪ್ರಕರಣ ದಾಖಲು, ನಾಲ್ವರ ಬಂಧನ, ಎಎಪಿ ಆಕ್ರೋಶ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹಲವೆಡೆ ಪ್ರಧಾನಿ ಮೋದಿ ವಿರೋಧಿ ಪೋಸ್ಟರ್ಗಳು ರಾರಾಜಿಸುತ್ತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 44 ಪ್ರಕರಣಗಳನ್ನು ದಾಖಲಿಸಿ, ನಾಲ್ಕು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರಲ್ಲಿ ಇಬ್ಬರು ತಮ್ಮದೇ ಮುದ್ರಣಾಲಯವನ್ನು ಹೊಂದಿರುವುದಾಗಿ ತಿಳಿದುಬಂದಿದೆ.
ಮಂಗಳವಾರ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಪೊಲೀಸರು ದೆಹಲಿಯ ಹಲವು ಸ್ಥಳಗಳಿಂದ ಸುಮಾರು 2,000 ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಈ ಪೋಸ್ಟರ್‌ಗಳಲ್ಲಿ ಹೆಚ್ಚಿನವು 'ಮೋದಿ ಹಠಾವೋ, ದೇಶ್ ಬಚಾವೋ (ಮೋದಿಯನ್ನು ತೆಗೆದುಹಾಕಿ, ದೇಶವನ್ನು ಉಳಿಸಿ)' ಎಂಬ ಘೋಷಣೆಯನ್ನು ಬರೆಯಲಾಗಿತ್ತು.