ತುಮಕೂರಲ್ಲಿ ಬಿಎಸ್‌ವೈ ಆಗಮಿಸಿದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನಾಯಿಗಳ ಕಾಟ : ಕೆಲಕಾಲ ಆತಂಕ ಸೃಷ್ಟಿ

ತುಮಕೂರು : ತುರುವೇಕೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿ ಮಾಜಿ ಸಿಎಂ ಬಿಎಸ್‌ವೈ ಯಡಿಯೂರಪ್ಪ ಹಸಿರು ಬಣ್ಣದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನಾಯಿ ಕಾಟ ಎದುರಾಗಿದ್ದು ಭಾರೀ ಆತಂಕ ಸೃಷಿಯಾದ ಘಟನೆ ಬೆಳಕಿಗೆ ಬಂದಿದೆ.
ಈ ಹಿಂದೆ ಮಾಜಿ ಸಿಎಂ ಬಿಎಸ್‌ವೈ ಯಡಿಯೂರಪ್ಪ ಕಲಬುರ್ಗಿಗೆ ಆಗಮಿಸಿದಾಗ ಕಸ, ಪ್ಲಾಸ್ಟಿಕ್ ಡ್ರಮ್ ಮೊದಲಾದವು ಹಾರಾಡಿ ಹೆಲಿಪ್ಯಾಡ್ ಕಾಣದಂಥ ಸನ್ನಿವೇಶ ನಿರ್ಮಾಣವಾಗಿತ್ತು, ಈ ಬೆನ್ನಲ್ಲೆ ಇದೀಗ ತುರುವೇಕೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಆಗಮಿಸಿದಾಗಲೂ ಇಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.