ಹಾಸನದಲ್ಲಿ ಗೆಲ್ಲೋ ಅರ್ಹತೆ ಇರೋರಿಗೆ ಟಿಕೆಟ್‌'; ಡ್ಯಾಮೇಜ್ ಕಂಟ್ರೋಲ್‌ಗೆ ಇಬ್ರಾಹಿಂ ಸರ್ಕಸ್‌

ಹಾಸನದಲ್ಲಿ ಗೆಲ್ಲೋ ಅರ್ಹತೆ ಇರೋರಿಗೆ ಟಿಕೆಟ್‌'; ಡ್ಯಾಮೇಜ್ ಕಂಟ್ರೋಲ್‌ಗೆ ಇಬ್ರಾಹಿಂ ಸರ್ಕಸ್‌

ಬೆಂಗಳೂರು: ಹಾಸನ ಟಿಕೆಟ್ ವಿಚಾರಕ್ಕೆ ಯಾರು ತಲೆ ಕೆಡಿಸಿಕೊಂಡಿಲ್ಲ. ಜೆಡಿಎಸ್‌ನಲ್ಲಿ ನಾಯಕತ್ವದ ಬಗ್ಗೆ ವಿವಾದವೇ ಇಲ್ಲ. ಎರಡು ಮೂರು ಕ್ಷೇತ್ರದಲ್ಲಿ ಗೊಂದಲ ಇದೆ ಅಷ್ಟೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಒಪ್ಪಿಕೊಂಡಿದ್ದಾರೆ.

ನ್ಯೂಸ್‌ ಫಸ್ಟ್‌ ಜೊತೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಹಾಸನ ಟಿಕೆಟ್‌ಗಾಗಿ ಸೂರಜ್ ರೇವಣ್ಣ ಕೇಳಿದ್ದು ತಪ್ಪು ಅಂತಾ ಅಲ್ಲ.

ಪ್ರತಿಯೊಬ್ಬರಿಗೂ ಆಸೆ ಇದ್ದೆ ಇರುತ್ತೆ. ತನ್ನ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಆದ್ರೆ ಹಾಸನದಲ್ಲಿ ಸ್ಪರ್ಧಿಸಲು ಕ್ಷೇತ್ರದ ಜನ ಇಷ್ಟ ಪಡಬೇಕು. ಅವರಿಗೆ ಗೆಲ್ಲುವ ಅರ್ಹತೆ ಇರಬೇಕು ಎಂದರು.

ಜೆಡಿಎಸ್ ನಾಯಕತ್ವದ ಬಗ್ಗೆ ಯಾರಾದರೂ ವಿವಾದ ಮಾಡಿದ್ದಾರಾ. ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ, ರೇವಣ್ಣ, ಭವಾನಿ ಯಾರೂ ಕೂಡ ತಲೆ ಕೆಡಿಸಿಕೊಂಡಿಲ್ಲ. ಪಕ್ಷದಲ್ಲಿ ಕುಳಿತು ಚರ್ಚೆ ಮಾಡ್ತೀವಿ. ಸಮಯ ಬಂದಾಗ ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳುತ್ತೆ. ಅಲ್ಲಿವರೆಗೂ ಕಾಯಿರಿ ಅನ್ನೋದು ನನ್ನ ಅಭಿಪ್ರಾಯ ಎಂದು ಇಬ್ರಾಹಿಂ ಹೇಳಿದ್ರು.

ರಾಮನಗರದಲ್ಲಿ ಬೇರೆ ಅರ್ಜಿದಾರರಿಲ್ಲ. ಹೀಗಾಗಿ ಅನಿತಾ ಕುಮಾರಸ್ವಾಮಿ, ನಿಖಿಲ್ ಹೆಸರು ಅನೌನ್ಸ್ ಮಾಡಿದ್ದಾರೆ. ಹಾಸನ ಕ್ಷೇತ್ರದಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಇದನ್ನ ಪಕ್ಷ ತೀರ್ಮಾನ ಮಾಡುತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ