ಕಾರಾಗೃಹದಲ್ಲಿ ಬೀಡಿ ಸಿಗರೇಟ್ ತಂಬಾಕು' ಮಾತ್ರ ಸಿಕ್ಕಿದೆ : ಮಂಗಳೂರು ಕಮಿಷನರ್ ಸ್ಪಷ್ಟನೆ
ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಇಂದು ಪೊಲೀಸರು ರೈಡ್ ಮಾಡಿದ ಸಂದರ್ಭದಲ್ಲಿ 'ಬೀಡಿ ಸಿಗರೇಟ್ ತಂಬಾಕು ಮಾತ್ರ ಸಿಕ್ಕಿದೆ' ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲ್ದೀಪ್ ಆರ್ ಜೈನ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಬೆಳಗ್ಗೆ ಅಕ್ರಮ ಚಟುವಟಿಕೆ ನಡೆಸುತ್ತಿರುವ ವಿಚಾರವಾಗಿ ಮಂಗಳೂರಿನ ಕೊಡಿಯಲ್ ಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸುಮಾರು 250ಕ್ಕೂ ಹೆಚ್ಚು ಪೊಲೀಸರು ದಿಢೀರ್ ರೈಡ್ ಮಾಡಲಾಗಿದೆ.