ಈ ಐಪಿಎಸ್ ಅಧಿಕಾರಿಯ ಐಷಾರಾಮಿ ಬಂಗಲೆ ನೋಡಿದ್ರೆ ನಿಮ್ಮ ಹುಬ್ಬೇರುವುದು ಖಂಡಿತ: ವಿಡಿಯೋ ವೈರಲ್

ನವದೆಹಲಿ: ಬಹುತೇಕರಿಗೆ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯ ಜೀವನ ಪಯಣದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಅಧಿಕಾರಿಗಳ ವೃತ್ತಿಜೀವನದ ಬಗ್ಗೆ ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಜನರು ಆಸಕ್ತಿ ವಹಿಸುತ್ತಾರೆ. ಇದೀಗ ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ ಅವರ ಅಧಿಕೃತ ನಿವಾಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ ಅವರ ಸರ್ಕಾರಿ ನಿವಾಸವನ್ನು ವಿಡಿಯೋದಲ್ಲಿ ನೋಡಬಹುದು. ಬಹಳ ವಿಶಾಲ ಪ್ರದೇಶದಲ್ಲಿ ಅಧಿಕೃತ ನಿವಾಸ ಹರಡಿಕೊಂಡಿದೆ. ಮಹಾದ್ವಾರದ ಮೂಲಕ ಮನೆಗೆ ಪ್ರವೇಶಿಸುವ ಅಭಿಷೇಕ್, ಒಂದು ಅಂತಸ್ತಿನ ಸರ್ಕಾರಿ ಬಂಗಲೆಯನ್ನು ತಲುಪುತ್ತಾರೆ. ಬಂಗಲೆಯ ಬಾಲ್ಕನಿಯಲ್ಲಿ ಒಂದು ಸ್ವಿಂಗ್ ಸಹ ಗೋಚರಿಸುತ್ತದೆ. ಬಂಗಲೆಯ ಮುಂದೆಯೇ ಗಾರ್ಡನ್ ಪ್ರದೇಶವೂ ಇದೆ. ಅದರ ಸುತ್ತಲೂ ಗಿಡಗಳು ಕಾಣಸಿಗುತ್ತವೆ.
2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಭಿಷೇಕ್ ಪಲ್ಲವ ಅವರ ಸರ್ಕಾರಿ ಮನೆಯಲ್ಲಿ ದೊಡ್ಡ ಉದ್ಯಾನ ಪ್ರದೇಶವೂ ಇದೆ. ಶೆಡ್ ಅಡಿಯಲ್ಲಿ ಕುಳಿತುಕೊಳ್ಳುವ ಸ್ಥಳವೂ ಇದೆ. ಉದ್ಯಾನದಲ್ಲಿ ಐಪಿಎಸ್ ಅಧಿಕಾರಿ ಪತ್ರಿಕೆ ಓದುವ ಉಯ್ಯಾಲೆಯೂ ಇದೆ. ಉದ್ಯಾನದಲ್ಲಿ ಮರದ ಮನೆ ಕೂಡ ಗೋಚರಿಸುತ್ತದೆ. ಅದನ್ನು ತಲುಪಲು ಏಣಿಯನ್ನೂ ಅಳವಡಿಸಲಾಗಿದೆ.
ಮನೆಯು ಐಷಾರಾಮಿ ಮತ್ತು ಸುಂದರವಾಗಿಯು ಕಾಣುತ್ತದೆ. ಛತ್ತೀಸ್‌ಗಢದ ದಾಂತೇವಾಡದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಶುರು ಮಾಡಿದ ನಂತರ ಅಭಿಷೇಕ್ ಪಲ್ಲವರಿಗೆ ಈ ಬಂಗಲೆ ಸಿಕ್ಕಿದೆ. (ಏಜೆನ್ಸೀಸ್)